alex Certify ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಹೆಚ್ಚಿನವರ ದೈನಂದಿನ ಜೀವನದಲ್ಲಿ ಚಹ ಅತ್ಯಂತ ಅವಶ್ಯಕವಾದ ಪಾನೀಯವಾಗಿದೆ. ಉತ್ತರಾಖಂಡದ ಫುಡ್ ಬ್ಲಾಗರ್ ಒಬ್ಬರು ‘ತೆಂಗಿನ ಚಹಾ’ ಪಾಕವಿಧಾನವನ್ನು ಹಂಚಿಕೊಂಡಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ.

ಉತ್ತರಾಖಂಡದ ಹಲ್ದ್ವಾನಿಯ ಆಹಾರ ಬ್ಲಾಗರ್ ಕವಿತಾ ರೈ ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ, ವಿಡಿಯೋದಲ್ಲಿ ತೆಂಗಿನ ಚಿಪ್ಪಿನಲ್ಲಿ ಚಹ ಮಾಡುವ ಪಾಕವಿಧಾನವನ್ನು ನೋಡಬಹುದು.

ಒಲೆಯ ಮೇಲೆ ಸ್ವಚ್ಛ ತೆಂಗಿನ ಚಿಪ್ಪನ್ನು ಇಡುತ್ತಿರುವ ರೈ ಅವರ ಕ್ಲೋಸ್-ಅಪ್ ಶಾಟ್‌ನೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಆಕೆ ಟೀ ಪೌಡರ್​, ನೀರು ಮತ್ತು ಸಕ್ಕರೆಯನ್ನು ಹಾಕಿ ಚಹ ತಯಾರಿಸಿದ್ದನ್ನು ನೋಡಬಹುದು.

ವಿಡಿಯೋ 873k ಲೈಕ್‌ಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಪಾಕವಿಧಾನದ ಬಗ್ಗೆ ಸಾಕಷ್ಟು ಕಮೆಂಟ್​ ಮಾಡುತ್ತಿದ್ದಾರೆ. ತೆಂಗಿನ ಚಿಪ್ಪು ಬಳಸಿ ಮಾಡುವುದು ಅಪಾಯ ಎಂದು ಕೆಲವರು ಸೂಚಿಸಿದ್ದರೆ, ಹಲವರು ಇದಕ್ಕೆ ಭೇಷ್​ ಎಂದಿದ್ದಾರೆ.

https://youtu.be/qBMRhaI20qc

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...