ನಾಗಪುರ: ಮಹಿಳೆಯರನ್ನು ಹಿಂಬಾಲಿಸುವುದು, ನಿಂದಿಸುವುದು ದೂಡುವುದನ್ನು ಕಿರಿಕಿರಿ ಉಂಟುಮಾಡುವ ಕೃತ್ಯಗಳು ಎಂದು ಪರಿಗಣಿಸಬಹುದೇ ಹೊರತು, ಐಪಿಸಿ ಸೆಕ್ಷನ್ 354ರ ಅಡಿ ಮಾನಭಂಗ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಹೇಳಿದೆ.
ನ್ಯಾಯಮೂರ್ತಿ ಅನಿಲ್ ಪನ್ಸಾರೆ ಅವರು ಪ್ರಕರಣವೊಂದರ ವಿಚಾರಣೆ ವೇಳೆ ಈ ಆದೇಶ ಹೊರಡಿಸಿದ್ದು, ಆರೋಪಿ ವಿರುದ್ಧದ ಕೇಸ್ ರದ್ದುಗೊಳಿಸಿದ್ದಾರೆ. ಮಹಿಳೆಯನ್ನು ಅನುಚಿತವಾಗಿ ಅರ್ಜಿದಾರ ಮುಟ್ಟಿಲ್ಲ. ಮಹಿಳೆಯ ಗೌರವಕ್ಕೆ ಧಕ್ಕೆಯಾಗುವ ರೀತಿ ನಡೆದುಕೊಂಡಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
36 ವರ್ಷದ ಕಾರ್ಮಿಕನೊಬ್ಬ ತನ್ನನ್ನು ಕೆಲವು ದಿನಗಳಿಂದ ಹಿಂಬಾಲಿಸಿಕೊಂಡು ಬಂದು ನಿಂದಿಸಿದ್ದಾನೆ. ಮೋಟರ್ ಸೈಕಲ್ ನಲ್ಲಿ ಬಂದು ದೂಡಿ ಬೀಳಿಸಿದ್ದಾನೆ ಎಂದು ಕಾಲೇಜು ವಿದ್ಯಾರ್ಥಿನಿ 2016ರಲ್ಲಿ ದೂರಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ವರ್ಧಾ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು 2023ರ ಜುಲೈನಲ್ಲಿ ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದ್ದು, ಕಾರ್ಮಿಕ ಹೈಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ಕಿರಿಕಿರಿಗೂ ಮಾನಭಂಗಕ್ಕೂ ವ್ಯತ್ಯಾಸವಿದೆ ಎಂದು ಹೇಳಿದ್ದು, ಆರೋಪಿ ವಿರುದ್ಧದ ಕೇಸ್ ರದ್ದುಗೊಳಿಸಿದೆ.
ಮಹಿಳೆಯನ್ನು ಒಂದೆರಡು ಬಾರಿ ಹಿಂಬಾಲಿಸುವುದು, ಬೈಸಿಕಲ್‌ನಿಂದ ನಿಂದಿಸುವುದು ಮತ್ತು ಅವಳನ್ನು ತಳ್ಳುವುದು ‘ಕಿರಿಕಿರಿ’ ಕೃತ್ಯಗಳು. ಆದರೆ ಐಪಿಸಿಯ 354 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅದರಂತೆ, ನ್ಯಾಯಾಲಯವು IPC ಯ ಸೆಕ್ಷನ್ 354 ರ ಅಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿತು,
ನ್ಯಾಯಮೂರ್ತಿ ಅನಿಲ್ ಎಲ್. ಪನ್ಸಾರೆ ಅವರು ಮೊಹಮ್ಮದ್ ಎಜಾಜ್ ಶೇಖ್ ಇಸ್ಮಾಯಿಲ್ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಸಮ್ಮತಿಸಿದರು ಮತ್ತು ಸೆಕ್ಷನ್ 354 ಐಪಿಸಿ ಅಡಿಯಲ್ಲಿ ಅವರನ್ನು ದೋಷಿ ಎಂದು ವಾರ್ಧಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿದರು.