ಚಿಕ್ಕ ಮಕ್ಕಳಲ್ಲಿ ಹಲ್ಲು ಬರುವಾಗ ಮಕ್ಕಳು ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ಮಗುವಿಗೆ ಏನಾಗ್ತಿದೆ ಎಂಬುದು ಗೊತ್ತಾಗದೆ ಪಾಲಕರು ಕಂಗಾಲಾಗ್ತಾರೆ. ಹಲ್ಲು ಬರುವಾಗ ಯಾವ ಲಕ್ಷಣ ಕಾಣಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಪರಿಹಾರವೇನು ಎಂಬುದರ ವಿವರ ಇಲ್ಲಿದೆ.
ಹಲ್ಲು ಮೂಡುವಾಗ ದಂತದಲ್ಲಿ ನೋವು ಉಂಟಾಗುವುದರಿಂದ ಮಗು ಮಲಗಿದ್ದಾಗ ಒಮ್ಮೆಲೇ ಅಳಬಹುದು. ಹಾಗಾದಲ್ಲಿ ಮಗುವಿನ ದಂತವನ್ನು ಸ್ವಚ್ಛವಾದ ಕೈಗಳಿಂದ ಉಜ್ಜಿ ಮತ್ತು ಮಗುವಿನ ಗಮನ ಬೇರೆಡೆ ಹರಿಯುವಂತೆ ಮಾಡಿ.
ಹಲ್ಲು ಮೂಡುವಾಗ ಭೇದಿ ಆಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಡಿಹೈಡ್ರೇಟ್ ಆಗದಿರುವಂತೆ ಎಚ್ಚರ ವಹಿಸಬೇಕು. ಲಿಕ್ವಿಡ್ ಆಹಾರವನ್ನು ನೀಡಬೇಕು. 2-3 ದಿನಗಳ ನಂತರವೂ ಭೇದಿ ನಿಲ್ಲದೇ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.
ಹಲ್ಲು ಹೊರಬರುವಾಗ ಮಕ್ಕಳಿಗೆ ಒಂದು ರೀತಿಯ ತುರಿಕೆ ಅಥವಾ ಅಸಮಾಧಾನವಿರುತ್ತದೆ. ಆಗ ಮಕ್ಕಳು ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿ ಕಚ್ಚುತ್ತಾರೆ.
ಮಕ್ಕಳಲ್ಲಿ ಇಂತಹ ತೊಂದರೆಗಳು ಕಂಡುಬಂದಲ್ಲಿ, ಕೈಯನ್ನು ಸ್ವಚ್ಛವಾಗಿ ತೊಳೆದು ಬೆರಳಿನ ಸಹಾಯದಿಂದ ಮಗುವಿನ ವಸಡನ್ನು ನಿಧಾನವಾಗಿ ಉಜ್ಜಬೇಕು.