ನಿಮ್ಮ ಸೌಂದರ್ಯ ಹಾಳಾಗಲು ನೀವು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳೇ ಕಾರಣವಾಗಬಹುದು. ಅವು ಯಾವುವು ಎಂದಿರಾ?
ರಾತ್ರಿ ವೇಳೆ ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುವುದು ಅಂದರೆ ದಿನಕ್ಕೆ ಕನಿಷ್ಠ 8 ಗಂಟೆ ಹೊತ್ತು ಮಲಗಿ ನಿದ್ದೆ ಮಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ ಇದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ವೇಳೆ ಫಂಕ್ಷನ್ ಮುಗಿಸಿ ಬಂದು ಮೇಕಪ್ ತೆಗೆಯದೆ ಮಲಗುವ ಅಭ್ಯಾಸ ನಿಮಗಿದೆಯೇ. ಇದು ನೀವು ಮಾಡುವ ಬಹುದೊಡ್ಡ ತಪ್ಪು. ರಾತ್ರಿ ಮಲಗುವ ಮುನ್ನ ಮರೆಯದೆ ಮೇಕಪ್ ತೆಗೆಯಿರಿ. ನಿಮ್ಮ ತ್ವಚೆಗೆ ಉಸಿರಾಡಲು ಜಾಗ ಕೊಡಿ.
ರಾತ್ರಿ ಮಲಗುವ ಮುನ್ನ ಮುಖ ತೊಳೆದು ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ತ್ವಚೆಯ ರಂಧ್ರಗಳ ಮೇಲೆ ಕೂತ ಕೊಳೆ ದೂರವಾಗುತ್ತದೆ. ಮೊಡವೆಗಳು ಇಲ್ಲವಾಗುತ್ತವೆ. ತ್ವಚೆ ಬೇಗ ಸುಕ್ಕುಗಟ್ಟುವುದನ್ನು ತಪ್ಪಿಸಬಹುದು.