ಮಗುವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಮಗು ತುಂಬಾ ಅಳುವಾಗ ತಾಯಂದಿರಿಗೆ ಚಿಂತೆ, ಆತಂಕ ಆಗುತ್ತದೆ ಜತೆಗೆ ಕೆಲವೊಮ್ಮೆ ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಮಗು ಅತ್ತರೆ ಅದನ್ನು ಸಮಾಧಾನ ಪಡಿಸಿ ಮಲಗಿಸುವ ಟ್ರಿಕ್ ಕಲಿತುಕೊಳ್ಳಿ. ಇದರಿಂದ ನಿಮ್ಮ ಚಿಂತೆ ದೂರವಾಗುತ್ತದೆ.
– ಮಗು ಗರ್ಭಾಕೋಶದಲ್ಲಿ ಬೆಚ್ಚಗಿನ ಸ್ಥಳದಲ್ಲಿ ಬೆಳೆದಿರುತ್ತದೆ. ಹಾಗಾಗಿ ಈ ವಾತಾವರಣಕ್ಕೆ ಬಂದಾಗ ಮಗು ಅಳಲು ಶುರು ಮಾಡುತ್ತದೆ. ಹಾಗಾಗಿ ಮಗುವನ್ನು ಬೆಚ್ಚಗೆ, ಬಿಗಿಯಾಗಿ ಸುತ್ತಿ ಮಲಗಿಸಿ. ಇದರಿಂದ ಮಗು ಬೇಗ ನಿದ್ರೆ ಮಾಡುತ್ತದೆ.
– ಮಗು ತುಂಬಾ ಅಳುತ್ತಿದ್ದಾಗ ಮಗುವನ್ನು ಸಮಾಧಾನಗೊಳಿಸಲು ಮಗುವನ್ನು ಕೈಯಲ್ಲಿ ಹಿಡಿದು ಹಿಂದಕ್ಕೆ ಮುಂದಕ್ಕೆ ಜೋಲಿ ತೂಗಿದ ಹಾಗೆ ಮಾಡಿ. ತಾಯಿ ಬೆಚ್ಚಗಿನ ಸ್ಪರ್ಶ ಸಿಕ್ಕಿ ಮಗು ಬೇಗನೆ ನಿದ್ರೆಗೆ ಜಾರುತ್ತದೆ.
-ಮಗುವಿಗೆ ಬೆರಳು ಚೀಪುವುದು ತುಂಬಾ ಇಷ್ಟ. ಹಾಗಾಗಿ ಮಗುವಿನ ಬಾಯಿಂದ ಬೆರಳನ್ನು ತೆಗೆದು ಬೇಸರಗೊಳಿಸಬೇಡಿ. ಮಗುವಿಗೆ ಚೀಪಲು ಬಿಡಿ. ಇದರಿಂದ ಮಗು ಬೇಗ ನಿದ್ರೆ ಮಾಡುತ್ತದೆ. ಹಾಗಂತ ಅದೇ ಅಭ್ಯಾಸವಾಗಲು ಬಿಡಬೇಡಿ.