alex Certify ಚಳಿಗಾಲದಲ್ಲಿ ಹೊಳೆಯುವ ತ್ವಚೆ ಪಡೆಯಲು ಅನುಸರಿಸಿ ಈ ʼಉಪಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೊಳೆಯುವ ತ್ವಚೆ ಪಡೆಯಲು ಅನುಸರಿಸಿ ಈ ʼಉಪಾಯʼ

ಮಳೆ, ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸವಾಲಿನ ಕೆಲಸವೇ ಸರಿ. ಅದಕ್ಕೆ ಕೆಲವು ಸಲಹೆಗಳಿವೆ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಹಾಲನ್ನು ಸೌಂದರ್ಯ ವರ್ಧಕ, ರಕ್ಷಕವಾಗಿ ಬಳಸಬಹುದು. ಇದರಲ್ಲೂ ಹಸಿ ಹಾಲಿನ ಬಳಕೆ ಉತ್ತಮ.

ಒಣ ಚರ್ಮದವರು ನಿಂಬೆ ರಸಕ್ಕೆ ಜೇನು ಸೇರಿಸಿ ಬಳಸಬಹುದು. ಇನ್ನು ಮುಖಕ್ಕೆ ಹೆಚ್ಚಿನ ಹೊಳಪು ಬೇಕು ಎಂದರೆ ಗುಲಾಬಿ ಜಲವನ್ನು ಸೇರಿಸಿ ಹೆಚ್ಚಿನ ಹೊಳಪನ್ನು ಪಡೆಯಬಹುದು.

ಸ್ಕ್ರಬ್ಬಿಂಗ್ ವಾರಕ್ಕೊಮ್ಮೆ ಮಾಡಿದರೆ ಸಾಕು. ಟೊಮೊಟೊ ಕತ್ತರಿಸಿ ಅದರಿಂದ ಮುಖವನ್ನು ಮೃದುವಾಗಿ ತಿಕ್ಕಿ ತೊಳೆಯುವುದರಿಂದ ಚರ್ಮ ಹೊಳಪಾಗಿ ಕಾಣುತ್ತದೆ. ಹಲವು ಹಣ್ಣುಗಳನ್ನು ಬಳಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳಿ.

ಮೊಸರು, ಅರಿಶಿಣ, ಕಡಲೆಹಿಟ್ಟಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದರೆ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ಸಹಜವಾಗಿ ನೀಡುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹೊರಗಿನ ಲೇಪನಗಳಿಗಿಂತ ಒಳಗಿನ ಪೋಷಣೆ ಮುಖ್ಯ. ದೇಹಕ್ಕೆ ಅವಶ್ಯಕವಾದ ನೀರು ಸೇವನೆಯನ್ನು ಮಳೆ, ಚಳಿಗಾಲದಲ್ಲೂ ಮುಂದುವರಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...