
ಹೂದೋಟದಲ್ಲಿ ಹೂವಿದ್ದರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಕೆಲವು ಸಲ ಎಷ್ಟೇ ಆರೈಕೆ ಮಾಡಿದರೂ ಗಿಡದಲ್ಲಿ ಸರಿಯಾಗಿ ಹೂ ಬಿಡುವುದಿಲ್ಲ. ಈ ರೀತಿಯಾಗಿ ಗುಲಾಬಿ ಗಿಡ ಬೆಳೆಸಿ ನೋಡಿ.
ಗುಲಾಬಿ ಹೂವಿನ ಗಿಡಕ್ಕೆ ಮಣ್ಣು, ಗೊಬ್ಬರ ಮತ್ತು ಬಿಸಿಲು ಅತ್ಯಗತ್ಯ. ಮಣ್ಣು ಗಟ್ಟಿಯಾಗಿರಬಾರದು. ಮತ್ತು ಕಪ್ಪು ಮಣ್ಣು ಇರಬಾರದು. ಹಾಗೇ ಪ್ರಕಾಶಮಾನವಾದ ಸೂರ್ಯ ಬೆಳಕಿನಲ್ಲಿ ಇಡಬಾರದು. ಗಿಡದ ಬೇರಿಗೆ ಪೆಟ್ಟಾಗದಂತೆ ಮಣ್ಣನ್ನು ಆಗಾಗ ಅಗೆಯುತ್ತಿರಬೇಕು.