ಇತ್ತೀಚೆಗೆ ಹಲವರಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜೀವನಪದ್ಧತಿ, ಆಹಾರ, ಸರಿಯಾದ ವ್ಯಾಯಾಮ ಇಲ್ಲದಿರುವಿಕೆಯಿಂದ ಈ ಸಮಸ್ಯೆ ಶುರುವಾಗುತ್ತದೆ. ಕೆಲವರಿಗೆ ಇದರಿಂದ ತೂಕ ಏರಿಕೆ, ತೂಕ ಇಳಿಕೆ ಸಮಸ್ಯೆ ಕಂಡು ಬರುತ್ತದೆ. ಈ ಥೈರಾಯ್ಡ್ ನ ಸಮಸ್ಯೆಯಿಂದ ತಲೆಕೂದಲು ಉದುರುವುದು, ಜೀರ್ಣಕ್ರೀಯೆಯಲ್ಲೂ ವ್ಯತ್ಯಾಸವಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ಇಲ್ಲಿದೆ ಒಂದಷ್ಟು ಮನೆಮದ್ದುಗಳು. ಒಮ್ಮೆ ಟ್ರೈ ಮಾಡಿ ನೋಡಿ.
ಅರ್ಧ ಕಟ್ಟು ಕೊತ್ತಂಬರಿಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಸೇರಿಸದೆ ಒಂದು ಮಿಕ್ಸಿ ಜಾರಿನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಸ್ಪೂನ್ ಕೊತ್ತಂಬರಿಸೊಪ್ಪಿನ ಮಿಶ್ರಣವನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗುತ್ತದೆ.
ಒಂದು ಕಪ್ ಅಗಸೆ ಬೀಜವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಪುಡಿ ಮಾಡಿಟ್ಟುಕೊಳ್ಳಿ. ದಿನಾ ಬೆಳಿಗ್ಗೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆಗಸೆ ಬೀಜದ ಪುಡಿ ಹಾಕಿಕೊಂಡು ಕುಡಿಯಿರಿ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇದೆ. ಹಾಗಾಗಿ ಥೈರಾಯ್ಡ್ ಸಮಸ್ಯೆಗೆ ಒಳ್ಳೆಯ ಮನೆ ಮದ್ದಾಗಿದೆ.
ಒಂದು ಗ್ಲಾಸ್ ಬಿಸಿ ನೀರಿಗೆ ಚಿಕ್ಕದ್ದಾಗಿ ಕತ್ತರಿಸಿಕೊಂಡ ಲಿಂಬೆ ಹಣ್ಣಿನ ಹೋಳುಗಳು 3, ಶುಂಠಿ 2 ಪೀಸ್ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ನೀರು ಉಗುರು ಬೆಚ್ಚಗಾದ ನಂತರ ಕುಡಿಯಿರಿ.