ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕೂತು ಬೆನ್ನು ನೋವು ಬಂದಿದೆಯೇ, ವೈದ್ಯರ ಬಳಿ ತೆರಳುವ ಮುನ್ನ ಈ ಸಲಹೆಗಳನ್ನು ಪಾಲಿಸಿ ನೋಡಿ.
ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಾಗಿದ್ದರೆ ನಿತ್ಯ ವ್ಯಾಯಾಮ ಮಾಡಿ. ಕನಿಷ್ಠ 20 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡುವುದರಿಂದ ನಿಮಗೆ ಬೆನ್ನಿನ ಸಮಸ್ಯೆ ಕಾಡದು. ನಿತ್ಯ ವರ್ಕೌಟ್ ಮಾಡಲು ಸಾಧ್ಯವಿಲ್ಲದಿದ್ದರೆ ವಾಕಿಂಗ್ ಗಾದರೂ ಸಮಯ ಮೀಸಲಿಡಿ.
ರಜಾ ದಿನಗಳಲ್ಲಿ ಮನೆಯಲ್ಲಿ ದೇಹಕ್ಕೆ ತೆಂಗಿನೆಣ್ಣೆ ಅಥವಾ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ರಿಲ್ಯಾಕ್ಸ್ ಪಡೆಯಿರಿ.
ಕಂಪ್ಯೂಟರ್ ಮುಂದೆ ಸರಿಯಾದ ಭಂಗಿಯಲ್ಲಿ ಕೂರುವುದನ್ನು ಕಲಿಯಿರಿ. ನಿಮಗೆ ತಿಳಿದಿರದಿದ್ದರೆ ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಸೊಂಟವನ್ನು ನೇರವಾಗಿಟ್ಟುಕೊಳ್ಳಿ, ಬೆನ್ನು ಮೂಳೆಯ ಮೇಲೆ ಒತ್ತಡ ಬೀರದಿರಲಿ. ತಪ್ಪು ಭಂಗಿಯಲ್ಲಿ ಕುಳಿತಿರುವುದೇ ಬೆನ್ನು ನೋವಿಗೆ ಕಾರಣವಾಗಿರಬಹುದು. ಈ ಬಗ್ಗೆ ಎಚ್ಚರ ವಹಿಸಿ.