
ಬಾಯಿಯಲ್ಲಿ ಹುಣ್ಣಾಗುವುದರಿಂದ ಊಟ ಮಾಡಲು ತೊಂದರೆಯಾಗುತ್ತದೆ, ತುಟಿ ಬಿಚ್ಚಲು ಕಷ್ಟವೆನಿಸುತ್ತದೆ. ಈ ನೋವಿನಿಂದ ತಕ್ಷಣ ಉಪಶಮನ ಹೊಂದಲು ಅನೇಕ ಮಾರ್ಗಗಳಿವೆ.
* ತಣ್ಣನೆಯ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಬಳಿಕ ಲವಂಗವನ್ನು ದವಡೆಯೊಳಗೆ ಇಟ್ಟುಕೊಂಡು ಅದರ ರಸ ಹುಣ್ಣಿನ ಮೇಲೆ ಬರುವಂತೆ ಮಾಡಬೇಕು. ಆ ರೀತಿ ಮಾಡಿದಾಗ ನೋವು ಕಡಿಮೆಯಾಗುವುದಲ್ಲದೆ, ಹುಣ್ಣು ಹರಡುವುದು ನಿಯಂತ್ರಣಕ್ಕೆ ಬರುತ್ತದೆ.
* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
* ಐದಾರು ತುಳಸಿ ಎಲೆಗಳನ್ನು ಅಗೆದು ನುಂಗಿ. ಪ್ರತಿದಿನ ನಾಲ್ಕೈದು ಬಾರಿ ಈ ರೀತಿ ಮಾಡಿದರೆ ಎರಡು ದಿನಗಳಲ್ಲಿ ಬಾಯಿಹುಣ್ಣು ದೂರವಾಗುತ್ತದೆ.
* ಬಾಯಿಹುಣ್ಣು, ಊತ ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಜೇನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಸ್ಪೂನ್ ಜೇನನ್ನು ಅಂಗೈಯಲ್ಲಿ
ತೆಗೆದುಕೊಂಡು ಬೆರಳನ್ನು ಅದರಲ್ಲಿ ಅದ್ದಿ ಅದರಿಂದ ಹುಣ್ಣಿನ ಮೇಲೆ ಹಚ್ಚಬೇಕು. ಊತ ಇದ್ದರೆ ಬಾಯಿಗೆ ಹಚ್ಚಬೇಕು.
* ಎಳನೀರನ್ನು ಕುಡಿಯಬೇಕು. ಅದೇ ರೀತಿ ಕೊಬ್ಬರಿ ಇಲ್ಲವೇ ಒಣಕೊಬ್ಬರಿಯನ್ನು ತಿಂದರೂ ಸಹ ಪರಿಹಾರ ಸಿಗುತ್ತದೆ. ಇದ್ಯಾವುದೂ ಸಾಧ್ಯವಾಗದೇ ಹೋದಲ್ಲಿ ಕೊಬ್ಬರಿ ಎಣ್ಣೆಯನ್ನು ಹುಣ್ಣ ಮೇಲೆ ಹಚ್ಚಬೇಕು.