
ಮನೆ ಹಾಗೂ ಕಚೇರಿ ಎರಡರಲ್ಲೂ ನಕಾರಾತ್ಮಕ ಶಕ್ತಿಯಿರುತ್ತದೆ. ಮನೆ, ಕಚೇರಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ, ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಲು ಕೆಲವೊಂದು ಉಪಾಯಗಳನ್ನು ಪಾಲಿಸಬೇಕಾಗುತ್ತದೆ.
ಮನೆ ಹಾಗೂ ಕಚೇರಿಯಲ್ಲಿ ಕಾಗದದ ರಾಶಿ ಹಾಕಬೇಡಿ.
ಕಚೇರಿಯಲ್ಲಿ ನೀವು ಕೆಲಸ ಮಾಡುವ ಟೇಬಲ್ ಕೆಳಗೆ ಕಸದ ಬುಟ್ಟಿ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಖುರ್ಚಿ ಹಿಂದೆ ಏನನ್ನೂ ಇಡಬೇಡಿ.
ಮನೆ ಅಥವಾ ಕಚೇರಿಯ ಪ್ರವೇಶ ದ್ವಾರದ ಬಾಗಿಲಿನ ಮೇಲೆ ಸೂರ್ಯಕಾಂತಿ ಹೂವನ್ನು ಬಿಡಿಸಿ.
ಉಡುಗೊರೆಯಾಗಿ ಬಂದ ಚಾಕು, ಚೂರಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ.
ಕಳ್ಳಿ ಹಾಗೂ ಮುಳ್ಳಿನ ಯಾವುದೇ ಸಸ್ಯವನ್ನು ಮನೆಯಲ್ಲಿಟ್ಟುಕೊಳ್ಳಬೇಡಿ.
ಒಗೆದ ಬಟ್ಟೆಯನ್ನು ರಾತ್ರಿ ಪೂರ್ತಿ ಹೊರಗೆ ಇಡಬೇಡಿ.
ಒದ್ದೆಯಾದ ಬಟ್ಟೆಯನ್ನು ಅಲ್ಲಿ-ಇಲ್ಲಿ ಎಸೆಯಬೇಡಿ.
ಬಾಗಿಲ ಹಿಂದೆ ಹಾಸಿಗೆಯನ್ನು ಇಡಬೇಡಿ.
ಬಾಗಿಲ ಹಿಂದೆ ಖಾಲಿ ಗೋಡೆಯಿದ್ರೆ ಗಾಜಿನ ಗ್ಲಾಸ್ ಗೆ ಹೂವನ್ನು ಹಾಕಿಡಿ.