ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ, ಮೊಬೈಲ್ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು ಕಪ್ಪು ಕಲೆ ಉಂಟಾಗುತ್ತದೆ.
ಒತ್ತಡ ಹೆಚ್ಚಾದಂತೆ ಉರಿಯೂತ ಹೆಚ್ಚಾಗುತ್ತದೆ. ಇದ್ರಿಂದ ಕಣ್ಣು ಕೆಂಪಾಗಿ ಕಣ್ಣಿನಲ್ಲಿನ ನೀರಿನಂಶ ಕಡಿಮೆಯಾಗಿ ದೃಷ್ಟಿದೋಶದ ಸಾಧ್ಯತೆ ಕಾಡುವ ಸಾಧ್ಯತೆ ಇರುತ್ತದೆ. ಈ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದ್ರೆ ದೃಷ್ಟಿದೋಷ ಸಮಸ್ಯೆ ಕಾಡುವ ಜೊತೆಗೆ ಕಣ್ಣಿನ ಸೌಂದರ್ಯ ಹಾಳಾಗುತ್ತದೆ. ಕಣ್ಣು ಹೊಳಪು ಕಳೆದುಕೊಳ್ಳುತ್ತದೆ.
ಕಣ್ಣಿನ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ. ದಿನವಿಡಿ ಸುಮಾರು 4 ರಿಂದ 5 ಲೀಟರ್ ನೀರು ಕುಡಿಯಿರಿ. ಕಡಿಮೆ ನೀರು ಕುಡಿಯುವುದರಿಂದ ಚರ್ಮ ಒಣಗಲು ಕಾರಣವಾಗುತ್ತದೆ. ಅದರ ನೇರ ಪರಿಣಾಮ ನಮ್ಮ ಕಣ್ಣುಗಳ ಮೇಲಾಗುತ್ತದೆ.
ಒಂದೇ ಸಮನೆ ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ವೀಕ್ಷಣೆ ಮಾಡಬೇಡಿ. ಸ್ವಲ್ಪ ಸಮಯ ಕಣ್ಣಿಗೆ ವಿಶ್ರಾಂತಿ ನೀಡಿ. ತಜ್ಞರನ್ನು ಭೇಟಿಯಾಗಿ ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಿರಿ. ಜೊತೆಗೆ ಒಂದು ಬಿಂದುವನ್ನು ತುಂಬಾ ಸಮಯ ನೋಡುವುದ್ರಿಂದ ಹಾಗೂ ಕಣ್ಣಿನ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡುವುದ್ರಿಂದ ಕಣ್ಣು ರಿಲ್ಯಾಕ್ಸ್ ಆಗುತ್ತದೆ. ಕಂಪ್ಯೂಟರ್ ನೋಡುತ್ತಿರುವಾಗ ಆಗಾಗ ಕಣ್ಣು ಮಿಟುಕಿಸ್ತಾ ಇದ್ರೆ ಒಳ್ಳೇದು.
ಕಂಪ್ಯೂಟರ್ ಬಳಕೆ ವೇಳೆ ಅದಕ್ಕೆ ಸೂಕ್ತವಾದ ಗ್ಲಾಸ್ ಬಳಸಿ. ಹಾಗೆ ಕಣ್ಣನ್ನು ಆಗಾಗ ತಣ್ಣನೆ ನೀರಿನಲ್ಲಿ ತೊಳೆಯುತ್ತಿರಿ. ಕಣ್ಣಿನಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳಿ.