alex Certify ಯೋಗ ಮಾಡುವಾಗ ತಪ್ಪದೇ ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಮಾಡುವಾಗ ತಪ್ಪದೇ ಪಾಲಿಸಿ ಈ ನಿಯಮ

ಉತ್ತಮ ಆರೋಗ್ಯವನ್ನು ಪಡೆಯಲು ಯೋಗ ಮಾಡುವುದು ಬಹಳ ಮುಖ್ಯವಾಗಿದೆ. ಇದರಿಂದ ದೈಹಿಕ ಸಮಸ್ಯೆಯನ್ನು ನಿವಾರಿಸಬಹುದು.

ಆದರೆ ಯೋಗಗಳಲ್ಲಿ ಬರುವ ಪ್ರತಿ ಆಸನವನ್ನು ಸರಿಯಾಗಿ ಮಾಡಬೇಕು. ಇಲ್ಲವಾದರೆ ದೇಹಕ್ಕೆ ಹಾನಿಯಾಗಬಹುದು. ಹಾಗಾಗಿ ಯೋಗ ಮಾಡುವಾಗ ಈ ನಿಯಮ ಪಾಲಿಸಿ.

*ನೀವು ಯೋಗ ಮಾಡುವಾಗ ಆರಂಭದಲ್ಲೇ ಕಠಿಣ ಭಂಗಿಗಳನ್ನು ಮಾಡಬೇಡಿ. ಮೊದಲಿಗೆ ಸುಲಭವಾದ ಭಂಗಿಗಳನ್ನು ಅಭ್ಯಾಸ ಮಾಡಿದರೆ ಉತ್ತಮ.

*ಯೋಗದ ಸಮಯದಲ್ಲಿ ನಡುವೆ ನೀರನ್ನು ಕುಡಿಯಬೇಡಿ. ಇದರಿಂದ ಅನಾರೋಗ್ಯದ ಸಮಸ್ಯೆ ಕಾಡಬಹುದು. ಹಾಗಾಗಿ ಯೋಗ ಮಾಡಿದ 15 ನಿಮಿಷದ ಬಳಿಕ ನೀರು ಸೇವಿಸಿ.

*ನಿಮಗೆ ಸಂಪೂರ್ಣವಾಗಿ ತಿಳಿದಿರುವ ಆಸನಗಳನ್ನು ಮಾಡಿ. ನೀವು ಯೋಗ ತಜ್ಞರಿಂದ ಕಲಿತಂತಹ, ಎಲ್ಲಾ ನಿಯಮಗಳು ತಿಳಿದಿರುವಂತಹ ಯೋಗ ಮಾಡಿ. ಯಾವುದೇ ಹೊಸ ಭಂಗಿಗಳನ್ನು ಮಾಡಿ ಹಾನಿ ಮಾಡಿಕೊಳ್ಳಬೇಡಿ.

*ಯೋಗ ಮಾಡುವಾಗ ಮೊಬೈಲ್ ಮೇಲೆ ಗಮನ ಹರಿಸಬೇಡಿ. ಇದರಿಂದ ಯೋಗ ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ನಿಮಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...