ತಾಯಿ ಲಕ್ಷ್ಮಿ ಕೃಪೆಗೆ ಪಾತ್ರವಾಗೋದು ಸುಲಭದ ಮಾತಲ್ಲ. ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದ್ರೆ ಸಾಲದು. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗುತ್ತದೆ. ನಿಯಮದಂತೆ ನಡೆದುಕೊಳ್ಳದೆ ಹೋದಲ್ಲಿ ಲಕ್ಷ್ಮಿ ಮುನಿಸಿಕೊಳ್ತಾಳೆ.
ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದು ಅನೇಕರು ಹೂ ಕೀಳ್ತಾರೆ. ತುಳಸಿಯ ಎಲೆಗಳನ್ನು ಕಿತ್ತು ಹೂ ಬುಟ್ಟಿಗೆ ಹಾಕ್ತಾರೆ. ಆದ್ರೆ ಸ್ನಾನ ಮಾಡದೆ ಕಿತ್ತ ತುಳಸಿ ಎಲೆಗಳನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಗಳು ಈ ಪೂಜೆಯನ್ನು ಸ್ವೀಕರಿಸುವುದಿಲ್ಲ. ಧನಲಕ್ಷ್ಮಿ ಇದರಿಂದ ತೃಪ್ತಳಾಗುವುದಿಲ್ಲ.
ಆತ ಲಕ್ಷ್ಮಿಯ ಎಷ್ಟು ದೊಡ್ಡ ಭಕ್ತನಾಗಿರಲಿ, ಗುರುವಿನ ಆರಾಧನೆ ಮಾಡದಿದ್ದಲ್ಲಿ ಲಕ್ಷ್ಮಿ ಆತನ ಮನೆಯಲ್ಲಿ ನೆಲೆಸುವುದಿಲ್ಲ. ಪತ್ನಿಯ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ವ್ಯಕ್ತಿಗೆ ಆರ್ಥಿಕ ಕಷ್ಟ ತಪ್ಪಿದ್ದಲ್ಲ.
ಸ್ವಚ್ಛತೆಯಿಲ್ಲದ ಮನೆಯನ್ನು ಲಕ್ಷ್ಮಿ ತಕ್ಷಣ ಬಿಡ್ತಾಳೆ. ಸ್ನಾನ ಮಾಡದೆ ಲಕ್ಷ್ಮಿ ಪೂಜೆ ಮಾಡುವ, ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ಯಾರ ಮನೆಯ ಮಹಿಳೆ, ಹಿರಿಯರಿಗೆ ಗೌರವ ನೀಡುವುದಿಲ್ಲವೋ, ಪರ ಪುರುಷನಿಗೆ ಆಸೆಪಡ್ತಾಳೋ, ಸದಾ ಗಲಾಟೆ ಮಾಡ್ತಾಳೋ ಆ ಮನೆಗೆ ಲಕ್ಷ್ಮಿ ಬರುವುದಿಲ್ಲ.
ಆಲಸಿ ವ್ಯಕ್ತಿಯ ಮನೆಗೂ ಲಕ್ಷ್ಮಿ ಕಾಲಿಡುವುದಿಲ್ಲ. ಕೆಲಸ ಮಾಡದೆ ಫಲ ಬೇಡುವ ವ್ಯಕ್ತಿ, ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಯಾವುದೇ ಪೂಜೆ ಮಾಡಿದ್ರೂ ಲಕ್ಷ್ಮಿ ತೃಪ್ತಳಾಗುವುದಿಲ್ಲ.
ಕಾರಣವಿಲ್ಲದೆ ಮನೆಯ ವ್ಯಕ್ತಿಗಳ ನಡುವೆ ಬೇಧಭಾವ ಮಾಡುವವರ ಮನೆಯಲ್ಲೂ ಲಕ್ಷ್ಮಿ ನೆಲೆಸುವುದಿಲ್ಲ. ವ್ಯಾಪಾರದಲ್ಲಿ ಅವರಿಗೆ ಎಂದೂ ಯಶ ಸಿಗುವುದಿಲ್ಲ.
ಪೂಜೆ ಮಾಡುವಾಗ ಕೋಪಗೊಳ್ಳುವ ಅಥವಾ ಜಗಳವಾಡ್ತಾ ದೇವರ ಪೂಜೆ ಮಾಡುವವರಿಗೆ ಲಕ್ಷ್ಮಿ ಒಲಿಯುವುದಿಲ್ಲ.
ಹಳಸಿದ ಹೂವನ್ನು ದೇವರಿಗೆ ಅರ್ಪಿಸುವ, ಮನೆ, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳದ, ಕೊಳಕು ಬಟ್ಟೆಯನ್ನು ಧರಿಸುವವನ ಬಳಿ ಸುಳಿಯುವುದಿಲ್ಲ.
ಸೂರ್ಯಾಸ್ತದ ವೇಳೆ ಅಥವಾ ಶುಭ ದಿನಗಳಲ್ಲಿ ಸ್ತ್ರೀ ಸಹವಾಸ ಮಾಡುವ, ಹಗಲಿನಲ್ಲಿ ಮಲಗುವ, ಪರರ ಹಣ ಹಾಗೂ ಪರಸ್ತ್ರೀ ಮೋಹಕ್ಕೆ ಬೀಳುವ ವ್ಯಕ್ತಿಗೆ ಲಕ್ಷ್ಮಿ ಒಲಿಯುವುದಿಲ್ಲ.