alex Certify ‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಪಾಲಿಸಿ ಈ ನಿಯಮ

Where to keep Laxmi idol at home? - Times of India

 

ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಒಂದಿಷ್ಟು ಸಂಪ್ರದಾಯಗಳ ಕುರಿತ ಮಾಹಿತಿ ಇಲ್ಲಿದೆ.

ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯ ಕಸ ಗುಡಿಸಬೇಡಿ, ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ, ಒಂದು ಕಡೆ ಗುಡ್ಡೆ ಮಾಡಿ ಇಟ್ಟು ಬೆಳಗಿನ ಜಾವ ಹೊರಗೆ ಹಾಕಿ, ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ, ಮಾತ್ರವಲ್ಲ ಬೇರೆಯವರಿಗೂ ನಿಲ್ಲದಂತೆ ನೀವೇ ತಿಳಿ ಹೇಳಿ.

ಸಂಜೆ ದೀಪ ಹೊತ್ತಿಸುವ ಸಮಯದಲ್ಲಿ ಮುಂಬಾಗಿಲನ್ನು ತೆರೆಯಿರಿ, ಹಿಂಭಾಗದ ಕದ ಮುಚ್ಚಿರಿ. ಪೊರಕೆಯ ತುದಿ ಭಾಗ (ಗುಡಿಸುವ ಭಾಗ)ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ. ಮೊರ, ಪೊರಕೆಗಳನ್ನು ಕಾಲುಗಳಿಂದ ಒದೆಯಬೇಡಿ. ಹೊರ ಬಾಗಿಲ ಹೊಸ್ತಿಲಲ್ಲೇ ಪಾದರಕ್ಷೆಗಳನ್ನು ಬಿಡಬಾರದು.

ರಂಗೋಲಿ ಹಾಕದೇ ಬರೇ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಅಶುಭ ಸೂಚಕವಾಗುತ್ತದೆ. ಗೃಹದ ಗೋಡೆ, ದೇವರ ಮನೆ ಮುಂತಾದ ಸ್ಥಳಗಳ ಮೇಲೆ ಶಾಯಿ, ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ವಿಕೃತಿ ಬರೆಯಬೇಡಿ. ನಡೆಯುವಾಗ ಕಾಲು ಸಪ್ಪಳ ಸಾಧ್ಯವಾದಷ್ಟು ಕಡಿಮೆ ಇರಲಿ.

ಮಂಗಳವಾರ, ಶುಕ್ರವಾರದಂದು ಅವಾಚ್ಯ, ಅಶುಭ ಶಬ್ದಗಳಿಂದ ಮಕ್ಕಳನ್ನು ಬೈಯಬೇಡಿ, ಕದನ, ಜಗಳಗಳಿಗೆ ಅವಕಾಶ ಕೊಡಬೇಡಿರಿ. ಹರಿದುಹೋದ ಬಟ್ಟೆಗಳನ್ನು ಮನೆಯವರು ತೊಡಬಾರದು, ಕೈಕಾಲು, ಬೆರಳುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ ಹಾಗೂ ಉಗುರುಗಳನ್ನು ರಾತ್ರಿಯಲ್ಲೂ, ಶುಕ್ರ, ಮಂಗಳ, ಶನಿವಾರಗಳಂದು ಕತ್ತರಿಸಬಾರದು, ಮನೆಯ ಮಧ್ಯ ಸ್ಥಳಗಳಲ್ಲಿ ಬಿಸಾಡಬಾರದು.

ದವಸ, ಧಾನ್ಯಗಳನ್ನು ಕಾಲಿನಿಂದ ಒದೆಯಬಾರದು, ಹಾಲನ್ನು ಚೆಲ್ಲಿದರೆ ಕೈಯಿಂದ ವಸ್ತ್ರದ ಮೂಲಕ ಶುದ್ದೀಕರಿಸಬೇಕು. ಕೆದರಿದ ಜಡೆ ಕೂದಲು, ಕುಂಕುಮವಿಡದ ಹಣೆ, ಅರಶಿಣ ಹಚ್ಚದ ಕೈಕಾಲುಗಳು ಮಹಿಳೆಯರಿಗೆ ಅಶುಭ ಸೂಚಕ ಎನಿಸುತ್ತದೆ. ಚಾಪೆ, ಹಾಸಿಗೆ, ಸೋಫಾ ಮೇಲೆ ಕುಳಿತು ಧ್ಯಾನ, ಪೂಜೆಗಳನ್ನು ಮಾಡಬೇಡಿ. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಇವುಗಳಲ್ಲಿ ಯಾವುದೇ ಕಂಡು ಬಂದರೆ ಅಲಕ್ಷ್ಮೀ (ದರಿದ್ರ ಲಕ್ಷ್ಮಿ) ತಾಂಡವವಾಡುವಳಾದ್ದರಿಂದ ಶೀಘ್ರವಾಗಿ ಸೂಕ್ತ ತಿದ್ದುಪಡಿ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...