ಉಸಿರಾಟ, ಆಹಾರ ಸೇವನೆಯಷ್ಟೇ ನಿದ್ರೆ ಕೂಡ ಮನುಷ್ಯನಿಗೆ ಅತ್ಯಗತ್ಯ. ಆಹಾರ ಸೇವನೆ ಮಾಡದೆ ಮನುಷ್ಯನ ದೇಹ ಹೇಗೆ ಕೆಲಸ ಮಾಡುವುದಿಲ್ಲವೋ ಹಾಗೆ ನಿದ್ರೆ ಇಲ್ಲವಾದ್ರೆ ದೇಹ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ನಿದ್ರೆಯ ಬಗ್ಗೆಯೂ ಶಾಸ್ತ್ರ ಹಾಗೂ ಆಯುರ್ವೇದದಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿ ನಿಯಮಿತವಾಗಿ ಈ ನಿಯಮಗಳನ್ನು ಪಾಲಿಸುತ್ತ ಬಂದ್ರೆ ಎಲ್ಲವೂ ಒಳ್ಳೆಯದಾಗಲಿದೆ.
ಶಾಸ್ತ್ರಗಳ ಪ್ರಕಾರ ಹಣೆ ಮೇಲೆ ತಿಲಕವನ್ನಿಟ್ಟು ಎಂದೂ ಮಲಗಬಾರದು. ಅದು ಅಶುಭವೆಂದು ಪರಿಗಣಿಸಲಾಗಿದೆ.
ಎಡ ಭಾಗಕ್ಕೆ ತಿರುಗಿ ಮಲಗುವುದ್ರಿಂದ ಆರೋಗ್ಯ ವೃದ್ಧಿಸುತ್ತದೆ. ಬಲ ಭಾಗಕ್ಕೆ ತಿರುಗಿ ಮಲಗುವುದ್ರಿಂದ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗುತ್ತದೆ.
ನೇರವಾಗಿ ಮಲಗುವುದ್ರಿಂದ ಬೆನ್ನು ಮೂಳೆ ನೋವಾಗುತ್ತದೆ. ಹೊಟ್ಟೆಯನ್ನು ಅಡಿ ಹಾಕಿ ಮಲಗುವುದ್ರಿಂದ ಕಣ್ಣಿನ ಸಮಸ್ಯೆ ಎದುರಾಗುತ್ತದೆ.
ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ಶಿಕ್ಷಣದಲ್ಲಿ ವೃದ್ಧಿಯಾಗುತ್ತದೆ.
ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ಆರೋಗ್ಯದ ಜೊತೆ ಆರ್ಥಿಕ ಲಾಭ ಕಾಣಬಹುದಾಗಿದೆ. ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ಸಮಸ್ಯೆ ಉಲ್ಬಣಿಸುತ್ತದೆ.
ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ತೊಂದರೆ ಎದುರಾಗುತ್ತದೆ.
ಸಂಜೆ ವೇಳೆ ಅಪ್ಪಿತಪ್ಪಿಯೂ ಮಲಗಬಾರದು.
ಹಾಸಿಗೆ ಮೇಲೆ ಕುಳಿತು ನಿದ್ರೆ ಮಾಡಬಾರದು.
ಮನೆಯ ಮುಖ್ಯ ಬಾಗಿಲಿಗೆ ತಲೆಯಿಟ್ಟು ಮಲಗಬಾರದು.
ಸೂರ್ಯಾಸ್ತವಾದ ಮೂರು ಗಂಟೆ ನಂತ್ರ ನಿದ್ರೆ ಮಾಡಬೇಕು.