ಮಕ್ಕಳು ಒಮ್ಮೆ ಟಿವಿ ಮುಂದೆಯೋ ಅಥವಾ ಆಟೋಟಗಳಲ್ಲಿ ಮಗ್ನರಾದರು ಅಂದರೆ ಮುಗೀತು. ಮತ್ತೆ ಅವರು ಓದಿನ ಕಡೆಗೆ ಗಮನ ಹರಿಸೋದಿಲ್ಲ. ಆಟಗಳ ಕಡೆಗೆ ಗಮನ ಹರಿಸಿದಷ್ಟು ಓದಿನ ಕಡೆಗೆ ಮಕ್ಕಳು ಲಕ್ಷ್ಯ ಕೊಡೋದು ತುಂಬಾನೇ ಕಡಿಮೆ. ಈಗಂತೂ ಆನ್ಲೈನ್ ಕ್ಲಾಸ್ಗಳಿಂದಾಗಿ ಮಕ್ಕಳನ್ನು ಓದಿಸೋದು ಪೋಷಕರಿಗೆ ಸವಾಲಿನ ಕೆಲಸವೇ ಸರಿ.
ಮಕ್ಕಳು ಆಟವಾಡಲೇಬಾರದು ಅಂತೇನಲ್ಲ. ಆಟದ ಜೊತೆ ಪಾಠ ಕೂಡ ಅಷ್ಟೇ ಮುಖ್ಯ. ಹೀಗಾಗಿ ಮಕ್ಕಳು ಓದುತ್ತಿಲ್ಲ ಎಂದು ತಲೆಕೆಡಿಸಿಕೊಂಡ ಪೋಷಕರು ನೀವಾಗಿದ್ದಾರೆ ನೀವು ವಾಸ್ತುಶಾಸ್ತ್ರಕ್ಕೆ ಮೊರೆ ಹೋಗಬಹುದಾಗಿದೆ. ಇದಕ್ಕಾಗಿ ನೀವು ಗಿಣಿಯ ಫೋಟೋವನ್ನು ತಂದು ಮಕ್ಕಳು ಓದುವ ಕೋಣೆಯಲ್ಲಿ ಉತ್ತರ ದಿಕ್ಕಿನಲ್ಲಿ ಅಳವಡಿಸಿ. ಈ ರೀತಿ ಮಾಡೋದ್ರಿಂದ ಮಕ್ಕಳು ಓದಿನ ಕಡೆಗೆ ಆಸಕ್ತಿ ವಹಿಸಲಿದ್ದಾರೆ .