ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಹಣ ಬೇಡ ಹೇಳಿ. ಎಲ್ಲರಿಗೂ ಅದು ಬೇಕು. ಈ ಬೇಕು ಎಂಬ ಪದವು ಗುರಿಯನ್ನು ಈಡೇರಿಸುತ್ತದೆ ಅದೇ ಗುರಿಯನ್ನು ನಾಶಗೊಳಿಸುತ್ತದೆ. ವ್ಯಕ್ತಿಯಲ್ಲಿನ ಅನಿಯಂತ್ರಿತ ಆಸೆಗಳ ಮಹಾ ಪೂರವೇ ಮುಂದೆ ವ್ಯತಿರಿಕ್ತವಾಗಿ ಸಾಲ ಎಂಬ ಶೂಲದಲ್ಲಿ ತಿರುಗುವಂತೆ ಮಾಡುತ್ತದೆ.
ಇದು ಒಂದು ಬಗೆಯ ಸ್ವಯಂಕೃತ ಅಪರಾಧವೇ ಸರಿ. ಇದನ್ನು ಹೊರತುಪಡಿಸಿದರೆ ಅನಿರೀಕ್ಷಿತವಾಗಿ ಎದುರಾಗುವ ಘಟನೆಗಳಿಂದ. ಕುಟುಂಬದ ಬೇಡಿಕೆಗಾಗಿ, ಭವಿಷ್ಯಕ್ಕಾಗಿ ಹಾಗೂ ಶುಭ ಕಾರ್ಯಗಳಿಗಾಗಿ, ಮೋಜು ಮಸ್ತಿಗಾಗಿ ಈ ರೀತಿ ಹಲವು ಬಗೆಯಾಗಿ ವ್ಯಕ್ತಿ ಸಾಲದ ಪಾಶದಲ್ಲಿ ಸಿಲುಕುತ್ತಾ ಸಾಗುತ್ತಾನೆ.
ವಿಪರ್ಯಾಸವೆಂದರೆ ಇದರ ಅರಿವು ಸಹ ಆತನಲ್ಲಿ ಇರುವುದಿಲ್ಲ. ಮುಂದೊಂದು ದಿನ ಸಮಸ್ಯೆಯೂ ತನ್ನನ್ನು ನಾಶಗೊಳಿಸಿದಾಗ ಆತ ಎಚ್ಚರವಾಗುತ್ತದೆ. ಆಗ ಏನು ಮಾಡಲು ಸಾಧ್ಯ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಕಷ್ಟಗಳನ್ನು ಅನುಭವಿಸುತ್ತಾನೆ.
ಸಾಲಬಾಧೆ ಬರದಂತೆ ಇರುವ ಮಾರ್ಗಗಳು
ನಮ್ಮ ಜೀವನ ನಮ್ಮ ಇತಿ ಮಿತಿಯಲ್ಲಿರಲಿ. ಆಸೆಬುರುಕತನ, ಲೋಭ, ಮೋಹದಿಂದ ದೂರವಿರಲಿ. ನಮ್ಮ ಹಣಕಾಸಿನ ಶಕ್ತಿಯನ್ನು ಅರಿತು ಜೀವನ ಸಾಗಿಸುವುದು. ಉಳಿತಾಯ ಯೋಜನೆ ಭವಿಷ್ಯದ ಬಾಗಿಲು.
ನಮ್ಮ ಜೀವನ ಶೈಲಿ ಆದಷ್ಟು ಸುಧಾರಣೆಯಿಂದ ಜಾಗ್ರತೆಯಿಂದ ವರ್ತಿಸಿದರೆ ಇಂಥ ಸಾಲ ಬೇಡುವ ಅಥವಾ ಬಾಧೆ ಪಡುವ ಸಂದರ್ಭ ಎದುರಾಗದು.
ಈಗಾಗಲೇ ಸಾಲ ಮಾಡಿ ಸಮಸ್ಯೆಯಲ್ಲಿ ಇರುವವರಿಗೆ ಶಾಸ್ತ್ರದಲ್ಲಿ ಪರಿಹಾರವಿದೆ.
ಆರ್ಥಿಕ ಚೇತರಿಕೆ ಹಾಗೂ ಧನಲಾಭವಾಗುವಂತಹ ಕೆಲಸಗಳಿಗೆ ಈ ಕಾರ್ಯದಿಂದ ಫಲಿತಾಂಶ ಕಾಣಬಹುದು
ನಿಮ್ಮ ಮನೆಯ ನೈರುತ್ಯ ಮೂಲೆ ಅಂದರೆ ಕುಬೇರ ಮೂಲೆ ಇದನ್ನು ಆದಷ್ಟು ಕತ್ತಲೆಯಾಗಿಡಿ ಮತ್ತು ಇಲ್ಲಿ ಗಾಳಿಯು ವೇಗವಾಗಿ ಹೊರಹೋಗದಂತೆ ವ್ಯವಸ್ಥೆಯಿರಲಿ. ಈಶಾನ್ಯ ಮೂಲೆ ಅಧಿಕ ಬೆಳಕು ಹಾಗೂ ಗಾಳಿ ಓಡಾಡುವಂತೆ ಇರಲಿ. ಏಕೆಂದರೆ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸಿ ನೈರುತ್ಯ ಮೂಲೆಯಿಂದ ಹೊರಹೋಗುತ್ತದೆ. ಕುಬೇರ ಮೂಲೆಯಲ್ಲಿ ಬರುವಂತಹ ಧನಾತ್ಮಕ ಶಕ್ತಿ ನೆಲೆಸಿ ನಿಧಾನಕ್ಕೆ ಹೋಗುವುದರಿಂದ ಬಂದಂತಹ ಹಣಕಾಸು ವ್ಯವಸ್ಥಿತವಾಗಿ ಮನೆಯಲ್ಲಿ ನೆಲೆಯಾಗುತ್ತದೆ. ಕುಬೇರ ಮೂಲೆಯನ್ನು ಆದಷ್ಟು ಭಾರವಾಗಿರುವಂತೆ ನೋಡಿಕೊಳ್ಳಿ. ಮತ್ತು ಇಲ್ಲಿ ನಿಮ್ಮ ವ್ಯವಹಾರ ಹಣಕಾಸು ಇಡುವ ಕಪಾಟುಗಳನ್ನು ಇಲ್ಲೇ ಇರಿಸಿ. ಇದರಿಂದ ಆರ್ಥಿಕ ಲಾಭ ನಿಶ್ಚಿತ.