ಚೀಸ್, ಪನ್ನೀರ್ ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳು ಡೈರಿ ಪದಾರ್ಥಗಳಾದ ಕಾರಣ ಇವುಗಳನ್ನು ಸಂಗ್ರಹಿಸಿಡುವುದು ತುಂಬಾ ಕಷ್ಟ. ಬಹಳ ಬೇಗನೆ ಹಾಳಾಗುತ್ತವೆ. ಹಾಗಾಗಿ ಚೀಸ್, ಪನ್ನೀರ್ ಗಳನ್ನು ಸಂಗ್ರಹಿಸಿಡಲು ಈ ವಿಧಾನವನ್ನು ಅನುಸರಿಸಿ.
ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಚೀಸ್ ಅಥವಾ ಪನ್ನೀರ್ ಗಳನ್ನು ಹಾಕಿ ಅದು ನೀರಿನಲ್ಲಿ ಮುಳುಗುವಂತೆ ನೋಡಿಕೊಳ್ಳಿ. ಇಲ್ಲವಾದರೆ ಅದು ಹುಳಿಯಾಗಿ ಹಾಳಾಗುತ್ತದೆ. ಬಳಿಕ ಅದನ್ನು ಫ್ರಿಜ್ ನಲ್ಲಿಡಿ. ಇದರಿಂದ ಚೀಸ್ ತುಂಬಾ ದಿನಗಳ ತನಕ ಬರುತ್ತದೆ.
ಚೀಸ್ ಅಥವಾ ಪನ್ನೀರ್ ಗಳನ್ನು ಒಂದು ವಾರಗಳವರೆಗೆ ತಾಜಾವಾಗಿರಿಸಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಉಪ್ಪನ್ನು ಮಿಕ್ಸ್ ಮಾಡಿ ಕರಗಿದ ಬಳಿಕ ಅದರಲ್ಲಿ ಚೀಸ್ ಅಥವಾ ಪನ್ನೀರ್ ಹಾಕಿ ಸಂಪೂರ್ಣವಾಗಿ ಮುಳುಗಿಸಿಡಿ. ಆಗಾಗ 2 ದಿನಕ್ಕೊಮ್ಮೆ ನೀರು ಬದಲಿಸುತ್ತಿರಿ.