alex Certify ಕಟ್ ಮಾಡಿದ ಹಣ್ಣು ಫ್ರೆಶ್ ಆಗಿರಲು ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ ಮಾಡಿದ ಹಣ್ಣು ಫ್ರೆಶ್ ಆಗಿರಲು ಅನುಸರಿಸಿ ಈ ವಿಧಾನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅದನ್ನು ಅತಿ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಲ್ಲೂ ಸೇಬು, ಕಿವಿ ಹಣ್ಣುಗಳಂತಹ ಸಣ್ಣ ಸಣ್ಣ ಹಣ್ಣುಗಳನ್ನು ಒಂದೇ ಸಮಯದಲ್ಲಿ ತಿಂದು ಮುಗಿಸಬಹುದು.

ಆದರೆ ಪಪ್ಪಾಯ, ಕಲ್ಲಂಗಡಿ ಹಣ್ಣುಗಳನ್ನು ಒಂದೇ ಬಾರಿ ತಿಂದು ಮುಗಿಸೋದು ಕಷ್ಟ. ಹಾಗಂತ ಇವುಗಳನ್ನು ಕಟ್ ಮಾಡಿ ಹಾಗೇ ಇಟ್ಟರೆ ಹಾಳಾಗುವ ಸಂಭವವಿರುತ್ತದೆ. ಫ್ರಿಡ್ಜ್ ಇಲ್ಲದಿರುವವರು ಹಣ್ಣುಗಳನ್ನು ಈ ವಿಧಾನ ಅನುಸರಿಸಿ ತಾಜಾವಾಗಿಡಬಹುದು.

* ನಿಂಬೆ ರಸವು ಹಣ್ಣಿನ ಆಕ್ಸಿಡೀಕರಣವನ್ನು ತಡೆಯುತ್ತದೆ. ಆದ್ದರಿಂದ ಕಟ್ ಮಾಡಿದ ಹಣ್ಣಿಗೆ ನಿಂಬೆ ರಸವನ್ನು ಹಚ್ಚುವುದರಿಂದ 6 ಗಂಟೆಗಳ ಕಾಲ ಅದನ್ನು ಹಾಳಾಗದಂತೆ ಇಡಬಹುದು.

* ಕಟ್ ಮಾಡಿದ ಹಣ್ಣುಗಳ ಪೀಸ್ ಗಳನ್ನು ಪ್ಲಾಸ್ಟಿಕ್ ಅಥವಾ ಅಲ್ಯೂಮಿನಿಯಂ ಕವರ್ ನೊಳಗೆ ಹಾಕಿ ಇಟ್ಟರೆ 3-4 ಗಂಟೆಗಳ ಕಾಲ ಹಾಗೇ ಇಡಬಹುದು.

* ಹಣ್ಣುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ತಣ್ಣಗಿರುವ ನೀರಿನಲ್ಲಿ ಇಟ್ಟರೆ 3-4 ಗಂಟೆಗಳ ಕಾಲ ತಾಜಾವಾಗಿಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...