ಬೇಡದ ಕೂದಲ ನಿವಾರಣೆಗೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡಲು ಕಷ್ಟವಾಗುವ ಕಾರಣ ಹೆಚ್ಚಿನ ಜನ ಶೇವಿಂಗ್ ಮೊರೆ ಹೋಗಿದ್ದಾರೆ.
ಮನೆಯಲ್ಲೇ ಶೇವಿಂಗ್ ಮಾಡುವ ಮುನ್ನ ಈ ಕ್ರಮಗಳ ಬಗ್ಗೆ ಎಚ್ಚರ ವಹಿಸಿ. ದೇಹದ ಯಾವುದೇ ಭಾಗದ ಕೂದಲು ತೆಗೆಯುವ ಮುನ್ನ ಆ ಭಾಗವನ್ನು ಸ್ವಚ್ಛವಾಗಿ ತೊಳೆಯಿರಿ. ಅಲ್ಲಿನ ಡೆಡ್ ಸ್ಕಿನ್ ನಾಶವಾಗಿ ಚರ್ಮ ನುಣುಪಾಗುತ್ತದೆ.
ವಿರುದ್ಧ ದಿಕ್ಕಿನಲ್ಲಿ ಕೂದಲನ್ನು ತೆಗೆಯಿರಿ. ಪಾರ್ಲರ್ ಗಳಲ್ಲಿ ಮಾಡುವಂತೆ ಕೆಳಭಾಗದಿಂದ ಮೇಲಕ್ಕೆ ಎಳೆಯಿರಿ. ಕಾಲಿನ ಕೂದಲು ಕೆಳಮುಖವಾಗಿ ಬೆಳೆದಿರುತ್ತವೆ. ಹಾಗಾಗಿ ಕೆಳಭಾಗದಿಂದಲೇ ಮೇಲಕ್ಕೆಳೆಯುವುದರಿಂದ ಕೂದಲು ಉಳಿಯುವುದಿಲ್ಲ.
ಹತ್ತರಿಂದ ಹದಿನೈದು ಬಾರಿ ಶೇವ್ ಮಾಡಿದ ಬಳಿಕ ರೇಝರ್ ಬದಲಾಯಿಸಿ. ಸೋಪ್ ಬದಲು ಶೇವಿಂಗ್ ಜೆಲ್ ಬಳಸಿ. ಇದರಿಂದ ಗಾಯವಾಗುವುದಿಲ್ಲ. ಚರ್ಮದ ರಂಧ್ರಗಳೂ ಮುಚ್ಚುತ್ತವೆ. ಶೇವ್ ಬಳಿಕ ಸ್ವಚ್ಛವಾಗಿ ಕೈ ಕಾಲು ತೊಳೆದು ಮರೆಯದೇ ಮಾಯಿಶ್ಚರೈಸರ್ ಹಚ್ಚಿ.