ಹೆರಿಗೆಯ ನಂತರ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಮಹಿಳೆಯರಿಗೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟಲು\ಹೋಗಲಾಡಿಸಲು ಈ ಕೆಲವು ವಿಧಾನಗಳನ್ನು ಅನುಸರಿಸಿ ನೋಡಿ.
ನಿತ್ಯ ಸ್ನಾನ ಮಾಡುವಾಗ ಕೊಬ್ಬರಿ ಎಣ್ಣೆಗೆ ಅಲೋವೇರಾ ಜೆಲ್ ಅನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ. ಹದಿನೈದು ನಿಮಿಷಗಳ ಬಳಿಕ ಸ್ನಾನ ಮಾಡಿ. ಒಂದು ತಿಂಗಳ ಕಾಲ ಬಿಡದೆ ಹೀಗೆ ಮಾಡಿದರೆ ಹೊಟ್ಟೆಯ ಕಲೆಗಳು ದೂರವಾಗುತ್ತವೆ.
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದರಿಂದಲೂ ನಿಮ್ಮ ಸ್ಟ್ರೆಚ್ ಮಾರ್ಕ್ ಸಮಸ್ಯೆ ದೂರವಾಗುತ್ತದೆ. ಸಾಕಷ್ಟು ನೀರು ಕುಡಿಯುವ ಮೂಲಕ, ವಿಟಮಿನ್ ಡಿ, ಒಮೆಗಾ 3 ಕೊಬ್ಬಿನಾಮ್ಲ ಇರುವ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಸ್ನಾನವಾದ ಬಳಿಕ ಉಡುಪು ಧರಿಸುವ ಮುನ್ನ ನೀವು ಸನ್ ಸ್ಕ್ರೀನ್ ಲೋಷನ್ ಅನ್ನು ಮಾರ್ಕ್ ಇರುವ ಜಾಗಗಳಿಗೆ ಹಚ್ಚಿ. ನೈಸರ್ಗಿಕ ಎಣ್ಣೆಗಳನ್ನು ಬಳಸುವುದರಿಂದಲೂ ನಿಮ್ಮ ತ್ವಚೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.