ಕೆಲವರು ಮಲಗಿದಾಕ್ಷಣ ನಿದ್ದೆಗೆ ಜಾರಿ ಬಿಡುತ್ತಾರೆ. ಇನ್ನು ಕೆಲವರಿಗೆ ಮಲಗಿ ಅರ್ಧ ಗಂಟೆಯಾದರೂ ನಿದ್ದೆ ಬರುವುದಿಲ್ಲ. ಹೀಗೆ ತಕ್ಷಣ ನಿದ್ದೆ ಪಡೆಯಲು ಏನು ಮಾಡಬೇಕು ಗೊತ್ತೇ…?
ಸಂಶೋಧನೆಯೊಂದರ ಪ್ರಕಾರ ನಿಮ್ಮ ಮುಖ ಹಾಗೂ ಭುಜದ ಭಾಗಗಳಿಗೆ ಸಂಪೂರ್ಣ ವಿರಾಮ ನೀಡುವ ಮೂಲಕ ಒತ್ತಡದಿಂದ ಬಿಡುಗಡೆ ಹೊಂದಿ ಹಾಗೂ ರಿಲ್ಯಾಕ್ಸ್ ಆಗಿ ಮಲಗಿದರೆ ಬಹುಬೇಗ ನಿದ್ದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಸಾಧ್ಯವಾದಷ್ಟು ದೀರ್ಘವಾಗಿ ಉಸಿರಾಡಿ. ನಿಮಗಿಷ್ಟವಾಗುವ ವ್ಯಕ್ತಿ ಅಥವಾ ಯೋಜನೆಗಳ ಬಗ್ಗೆ ಮಾತ್ರ ಚಿಂತಿಸಿ. ಕೆಟ್ಟ ವಿಚಾರಗಳನ್ನು ಹತ್ತಿರ ಸುಳಿಯಗೊಡದಿರಿ. ಹೀಗೆ ಮಾಡುವುದರಿಂದ ಐದು ನಿಮಿಷದೊಳಗೆ ಉತ್ತಮ ನಿದ್ದೆ ನಿಮ್ಮದಾಗುತ್ತದೆ.
ನಿದ್ದೆ ಬರುವುದೇ ಇಲ್ಲ ಎಂಬ ನಕಾರಾತ್ಮಕ ಯೋಚನೆಗಳನ್ನು ಬದಿಗಿಟ್ಟು ಪಾಸಿಟಿವ್ ಆಗಿ ಯೋಚಿಸಿ. ಮಲಗುವ ಮುನ್ನ ನೆತ್ತಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಅಂಗಾಲುಗಳಿಗೂ ತುಸು ಹಚ್ಚಿಕೊಳ್ಳಿ. ಮೃದುವಾದ ಆರಾಮದಾಯಕ ತಲೆದಿಂಬು ಬಳಸಿ. ಹತ್ತು ನಿಮಿಷದೊಳಗೆ ನಿದ್ದೆ ನಿಮ್ಮನ್ನು ಆವರಿಸದಿದ್ದರೆ ಮತ್ತೆ ಹೇಳಿ.