ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ.
ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ ಹಳದಿ ಹಲ್ಲಿಗೆ ಕಾರಣವಾಗುತ್ತದೆ. ಈ ಹಳದಿಗಟ್ಟಿದ ಹಲ್ಲನ್ನು ಹೇಗೆ ಬಿಳುಪಾಗಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್
ಕಾಲು ಟೀ ಸ್ಪೂನ್ ನಷ್ಟು ಬೇಕಿಂಗ್ ಸೋಡಕ್ಕೆ 3 ಹನಿ ಲಿಂಬೆ ಹಣ್ಣಿನ ರಸ ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಹಲ್ಲುಜ್ಜುವ ಬ್ರಷ್ ನ ಸಹಾಯದಿಂದ ನಿಧಾನಕ್ಕೆ ನಿಮ್ಮ ಹಲ್ಲನ್ನು ತಿಕ್ಕಿ. ಒಸಡಿನ ತೊಂದರೆ ಇರುವವರು ಇದನ್ನು ಮಾಡಬೇಡಿ.
1 ಚಿಟಿಕೆ ಉಪ್ಪು, 1 ಚಿಟಿಕೆ ಬೇಕಿಂಗ್ ಸೋಡಾ, 3 ಹನಿ ಲಿಂಬೆ ಹಣ್ನಿನ ರಸ, 4 ಹನಿ ತೆಂಗಿನೆಣ್ಣೆ ಇವಿಷ್ಟನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ. ಇದರಿಂದ ಹಲ್ಲುಜ್ಜುವುದರಿಂದ ಕೂಡ ನಿಮ್ಮ ಹಳದಿಗಟ್ಟಿದ ಹಲ್ಲು ಬಿಳಿಯಾಗುತ್ತದೆ.
*ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಹಳದಿಯಾಗುವುದನ್ನು ತಡೆಗಟ್ಟಬಹುದು. ಸಾಸಿವೆ, ಸನ್ ಫ್ಲವರ್ ಅಥವಾ ಕೊಬ್ಬರಿ ಎಣ್ಣೆ. ಬೆಳಿಗ್ಗೆ ಎದ್ದಾಕ್ಷಣ ಎಣ್ಣೆಯಿಂದ ಬಾಯಿ ಮುಕ್ಕಳಿಸಿ.
ಆ್ಯಪಲ್ ಸೈಡರ್ ವಿನೇಗರ್ ಬ್ಯಾಕ್ಟಿರಿಯಾವನ್ನು ಕೊಲ್ಲುತ್ತದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಬಾಯನ್ನು ಸ್ವಚ್ಚಗೊಳಿಸುವುದಲ್ಲದೇ ಹಲ್ಲನ್ನು ಬಿಳುಪಾಗಿಸುತ್ತದೆ. ಇದರಿಂದ ಬಾಯಿ ಮುಕ್ಕಳಿಸಿದ ನಂತರ ಶುದ್ಧವಾದ ನೀರಿನಿಂದ ಮತ್ತೊಮ್ಮೆ ಬಾಯಿ ಮುಕ್ಕಳಿಸಿ.
*ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚುಚ್ಚು ಸೇವಿಸಿ. ಸ್ಟ್ರಾಬೆರಿಸ್ ಹಾಗೂ ಫೈನಾಪಲ್ ಹಲ್ಲನ್ನು ಬಿಳುಪಾಗಿಸಲು ಸಹಾಯ ಮಾಡುತ್ತದೆ.