ಇತ್ತೀಚಿನ ದಿನಗಳಲ್ಲಿ ಟೇಬಲ್ ಲೈಟ್ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಕೆಲವರು ಸರಳವಾದ ಟೇಬಲ್ ಲೈಟ್ ಬಳಸುತ್ತಾರೆ. ಕೆಲವರು ಡಿಸೈನರ್ ಗಳು ಮತ್ತು ಎಲ್ ಇ ಡಿ ಮರದ ಟೇಬಲ್ ಲ್ಯಾಂಪ್ ಗಳನ್ನು ಬಳಸುತ್ತಾರೆ. ಇದು ರಾತ್ರಿ ವೇಳೆ ಮಕ್ಕಳಿಗೆ ಅಧ್ಯಯನ ಮಾಡಲು, ಕಚೇರಿಯ ಕೆಲಸ ಮಾಡಲು ಸಹಕಾರಿಯಾಗಿದೆ.
ಹಾಗಾಗಿ ಈ ಟೇಬಲ್ ಲೈಟ್ ಗಳನ್ನು ಸ್ವಚ್ಛಗೊಳಿಸಲು ಈ ವಿಧಾನಗಳನ್ನು ಅನುಸರಿಸಿ.
ಸರಳವಾದ ಟೇಬಲ್ ಲೈಟ್ ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಅಡುಗೆ ಸೋಡಾ ಅಥವಾ ವಿನೆಗರ್ ಅನ್ನು ಬಳಸಿ. ಲೈಟ್ ಗೆ ಅಡುಗೆ ಸೋಡಾ ಅಥವಾ ವಿನೆಗರ್ ಸಿಂಪಡಿಸಿ ಸ್ವಲ್ಪ ಸಮಯ ಬಿಟ್ಟು ಬ್ರಷ್ ನಿಂದ ಸ್ವಚ್ಛಗೊಳಿಸಿ. ಇದರಿಂದ ಲೈಟ್ ಕ್ಲೀನ್ ಆಗುತ್ತದೆ.
ಡಿಸೈನರ್ ಲೈಟ್ ಗಳನ್ನು ಸ್ವಚ್ಛಗೊಳಿಸಿಲು ಕೂಡ ಅಡುಗೆ ಸೋಡಾ ಅಥವಾ ವಿನೆಗರ್ ಅನ್ನು ಬಳಸಬಹುದು. ಅಡುಗೆ ಸೋಡಾ ಅಥವಾ ವಿನೆಗರ್ ಅನ್ನು ಸಿಂಪಡಿಸಿ ಮೈಕ್ರೋಫೈಬರ್ ಬಟ್ಟೆಯನ್ನು ನೀರಿನಲ್ಲಿ ಒದ್ದೆ ಮಾಡಿ ಸ್ವಚ್ಛಗೊಳಿಸಿದರೆ ಸುಲಭವಾಗಿ ಸ್ವಚ್ಛವಾಗುತ್ತದೆ.
ಮರದ ಟೇಬಲ್ ಲೈಟ್ ಅನ್ನು ಸ್ವಚ್ಛಗೊಳಿಸಲು ವಿನೆಗರ್ ಜೊತೆಗೆ ಯಾವುದಾದರೊಂದು ಆಯಿಲ್ ಅನ್ನು ಮಿಕ್ಸ್ ಮಾಡಿ ಸ್ವಚ್ಛಗೊಳಿಸಿ. ಹಾಗೇ ಟೂತ್ ಪೇಸ್ಟ್ ಬಳಸಿ ಕೂಡ ಸ್ವಚ್ಛಗೊಳಿಸಬಹುದು.