
ಹ್ಯಾಡ್ಸಂ ಆಗಿ ಸದಾ ಯಂಗ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ, ಅದಕ್ಕಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಬಾಹ್ಯ ಸೌಂದರ್ಯದ ಮೂಲಗುಟ್ಟು ಮನಸ್ಸಿನ ಆರೋಗ್ಯ. ವಿನಾಕಾರಣ ಸಿಟ್ಟಾಗಬೇಡಿ. ಹಾಸ್ಯಪ್ರಜ್ಞೆ ಮೈಗೂಡಿಸಿಕೊಳ್ಳಿ. ಖಿನ್ನತೆಗೆ ಒಳಗಾಗದಿರಿ. ಕ್ಲಿಷ್ಟಕರ ಸನ್ನಿವೇಶವನ್ನು ನಿಭಾಯಿಸುವ ಬಗೆ ಕಲಿಯಿರಿ. ನಿಮ್ಮ ವ್ಯಕ್ತಿತ್ವವೇ ಸೌಂದರ್ಯದ ಸೂತ್ರ ಎಂಬುದನ್ನು ಮರೆಯದಿರಿ.
ಬಿಸಿಲಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚಲು ಮರೆಯದಿರಿ. ನಿಮ್ಮ ತ್ವಚೆಯ ಕಾಳಜಿ ವಹಿಸುವುದು ಸದಾಕಾಲ ಮುಖ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಮೊದಲ ಆದ್ಯತೆ ತ್ವಚೆಯ ಸಂರಕ್ಷಣೆಯತ್ತ ಇರಲಿ.
ಆಹಾರ ಸೇವಿಸುವಾಗ ಹಿತಮಿತವಾಗಿರುವಂತೆ ನೋಡಿಕೊಳ್ಳಿ. ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸದಿರಿ. ನಿತ್ಯ ಕಚೇರಿಗೆ ಹೋಗುವವರಾದರೆ ವಾರದಲ್ಲಿ ಮೂರು ದಿನವಾದರೂ ಮನೆಯೂಟ ಕೊಂಡೊಯ್ಯಿರಿ. ಸದಾ ಸೋಡಾ ಬೆರೆಸಿದ ಹೋಟೆಲ್ ಊಟ ಸೇವನೆಯಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ.
ಸಾಕಷ್ಟು ನಿದ್ದೆ ಮಾಡಿ, ನೀರು ಕುಡಿಯಿರಿ. ನಿಯಮಿತವಾಗಿ ವಾಕಿಂಗ್ ಹೋಗಿ ಇಲ್ಲವೇ ಕೆಲವಷ್ಟು ವ್ಯಾಯಾಮಗಳನ್ನು ಮೈಗೂಡಿಸಿಕೊಳ್ಳಿ. ಧ್ಯಾನ ಮಾಡುವುದರಿಂದ ಮಾನಸಿಕ ಶಕ್ತಿಯೂ ಹೆಚ್ಚಿ ನೀವು ಮತ್ತಷ್ಟು ಸಬಲರಾಗುತ್ತೀರಿ ಎಂಬುದು ನೆನಪಿರಲಿ.