ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸುವುದು ಅಗತ್ಯ. ಕೂದಲಿನ ಗುಣಮಟ್ಟ ಕಾಯ್ದುಕೊಳ್ಳಲು ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಮೊಟ್ಟೆ
ಮೊಟ್ಟೆಗಳು ಪ್ರೊಟೀನ್ ಹಾಗೂ ಬಯೋಟಿನ್ ನ ಉತ್ತಮ ಮೂಲಗಳು. ಇವೆರಡು ಕೂದಲಿನ ಬೆಳವಣಿಗೆ ಹಾಗೂ ಕೂದಲಿನ ಗುಣಮಟ್ಟಕ್ಕೆ ಅಗತ್ಯವಾದವು.
ಪಾಲಕ್
ಕೂದಲು ಉದುರುವಿಕೆಗೆ ಕಬ್ಬಿಣದ ಕೊರತೆಯೂ ಮುಖ್ಯ ಕಾರಣ. ಪಾಲಕ್ ನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಅದರ ಬಳಕೆ ಹೆಚ್ಚಿಸಿ.
ಮೀನು
ಮೀನಿಗಿಂತ ಉತ್ತಮ ಆಹಾರ ಮತ್ತೊಂದಿಲ್ಲ. ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಹೇರಳವಾಗಿದ್ದು, ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಟ್ಸ್
ನಟ್ಸ್ ನಲ್ಲಿ ಪೋಷಕ ಸತ್ವಗಳಾದ ವಿಟಮಿನ್ ಎ, ಬಿ, ಜಿಂಕ್ ಹಾಗೂ ಅಗತ್ಯ ಕೊಬ್ಬಿನಂಶ ಇರುತ್ತದೆ. ಇವೆಲ್ಲವೂ ಕೂದಲ ಪೋಷಣೆ ಮಾಡುವುದಲ್ಲದೆ ಇತರ ಆರೋಗ್ಯ ಲಾಭವೂ ಇದೆ.