ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ ಅಲಂಕಾರ ಮಾಡ್ತಾರೆ.
ಕ್ರಿಸ್ ಮಸ್ ಟ್ರೀ ಅಲಂಕಾರದ ವೇಳೆ ವಾಸ್ತು ಶಾಸ್ತ್ರಗಳನ್ನು ಅನುಸರಿಸಿದ್ರೆ ಒಳ್ಳೆಯದು. ವಾಸ್ತು ಶಾಸ್ತ್ರ ದಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ಕ್ರಿಸ್ಮಸ್ ಟ್ರೀಯನ್ನು ಹೇಗೆ ಅಲಂಕಾರ ಮಾಡಬೇಕೆಂದು ವಿವರಿಸಲಾಗಿದೆ.
ಆಗ್ನೇಯ ದಿಕ್ಕಿನಲ್ಲಿ ಕ್ರಿಸ್ ಮಸ್ ಟ್ರೀ ಇಟ್ಟರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಸಮೃದ್ಧಿ, ಸಂತೋಷ ಮನೆಯಲ್ಲಿ ಮನೆ ಮಾಡಿರುತ್ತದೆ. ಕೆಲವರು ಮನೆ ಮುಂದೆ ಕ್ರಿಸ್ ಮಸ್ ಟ್ರೀ ಇಡ್ತಾರೆ. ಆದ್ರೆ ಅದು ತಪ್ಪು. ಮುಖ್ಯ ಗೇಟ್ ಅಥವಾ ವಾಶ್ ರೂಮಿನ ಬಳಿ ಕ್ರಿಸ್ ಮಸ್ ಟ್ರೀ ಇಡಬಾರದು. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಯಶಸ್ಸು ದೂರವಾಗುತ್ತದೆ.
ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇದ್ರೆ ಆಯಸ್ಸು ವೃದ್ಧಿಯಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಫೆಂಗ್ ಶೂಯಿ ಪ್ರಕಾರ ಕ್ರಿಸ್ ಮಸ್ ಮರವನ್ನು ಡ್ರಾಯಿಂಗ್ ರೂಮಿನಲ್ಲಿ ಇಡಬಾರದು. ಹಾಗೆ ಬಂಗಾರದ ಬಣ್ಣದಲ್ಲಿ ಟ್ರೀಯನ್ನು ಅಲಂಕಾರ ಮಾಡಬೇಕು. ಇಡೀ ಮರವನ್ನು ಒಂದೇ ಬಣ್ಣದಿಂದ ಅಲಂಕಾರ ಮಾಡಬೇಕು.