ಹೆಚ್ಚಿನ ಮಹಿಳೆಯರು ಆಲೂಗಡ್ಡೆ, ಈರುಳ್ಳಿಯಂತಹ ತರಕಾರಿಗಳನ್ನು ಹೆಚ್ಚು ಖರೀದಿಸಿ ಅಡುಗೆ ಮನೆಯಲ್ಲಿ ಇಡುತ್ತಾರೆ. ಅದರಲ್ಲೂ ಈರುಳ್ಳಿ ತುಂಬಾ ಹೆಚ್ಚು ಬಳಸುವುದರಿಂದ ಅದನ್ನು ಹೆಚ್ಚಾಗಿ ತಂದು ಇಡುತ್ತಾರೆ. ಆದರೆ ಈ ಈರುಳ್ಳಿ ಕೆಲವೊಮ್ಮೆ ಮೊಳಕೆಯೊಡೆಯುತ್ತದೆ. ಹಾಗಾಗಿ ಹೀಗೆ ಆಗಬಾರದಂತಿದ್ದರೆ ಈ ಸಲಹೆಯನ್ನು ಪಾಲಿಸಿ.
ಸಾಮಾನ್ಯವಾಗಿ ಜನರು ಈರುಳ್ಳಿಯನ್ನು ಆಲೂಗಡ್ಡೆ, ಬೆಳ್ಳುಳ್ಳಿ, ಶುಂಠಿ ಮುಂತಾದ ತರಕಾರಿಗಳ ಒಟ್ಟಿಗೆ ಇಡುತ್ತಾರೆ. ಇವುಗಳು ಎಥಿಲೀನ್ ಎಂಬ ರಾಸಾಯನಿಕ ಹೊಂದಿದ್ದು, ಇವು ಈರುಳ್ಳಿ ಮೊಳೆಯೊಡೆಯಲು ಕಾರಣವಾಗುತ್ತವೆ. ಹಾಗಾಗಿ ಇತರ ತರಕಾರಿಗಳೊಂದಿಗೆ ಮಿಕ್ಸ್ ಮಾಡಿ ಇಡಬೇಡಿ.
ಈರುಳ್ಳಿಯನ್ನು ಕಾಗದ ಅಥವಾ ಕವರ್ ನಲ್ಲಿ ಸುತ್ತಿ ತಂಪಾದ ಸ್ಥಳದಲ್ಲಿ ಇಡಿ. ಇದರಿಂದ ಅದು ಬೇಗನೆ ಮೊಳೆಯೊಡೆಯುವುದಿಲ್ಲ.
ಅನೇಕ ಜನರು ಈರುಳ್ಳಿಯನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಡುತ್ತಾರೆ. ಹೀಗೆ ಮಾಡಬೇಡಿ. ಯಾಕೆಂದರೆ ಫ್ರಿಜ್ ನಲ್ಲಿಟ್ಟ ಈರುಳ್ಳಿ ಬೇಗ ಮೊಳಕೆಯೊಡೆಯುತ್ತದೆ.
ಪ್ಲಾಸ್ಟಿಕ್ ಚೀಲದಲ್ಲಿ ಈರುಳ್ಳಿಯನ್ನು ಸಂಗ್ರಹಿಸಿಡಬೇಡಿ. ಇದರಿಂದ ಈರುಳ್ಳಿ ಬೇಗ ಬಿಸಿಯಾಗಿ ಮೊಳೆಯೊಡೆಯುತ್ತದೆ. ಹಾಗಾಗಿ ಈರುಳ್ಳಿಯನ್ನು ಸುತ್ತಿ ಇಡಲು ಹತ್ತಿ ಬಟ್ಟೆ ಬಳಸಿ.