ಮನೆಯಲ್ಲೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ.
ವಯಸ್ಸು ಇಪ್ಪತ್ತೈದರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ರಂಧ್ರಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ. ತ್ವಚೆಗೆ ಸೂಕ್ತ ಆರೈಕೆ ನೀಡದಿದ್ದರೆ ಮುಖ ಮತ್ತಷ್ಟು ವಿಕಾರವಾಗಿ ಕಾಣುವಂತಾಗಬಹುದು.
ತ್ವಚೆಯ ರಂಧ್ರಗಳಲ್ಲಿ ಕೂರುವ ಮಣ್ಣು ಮುಖವನ್ನು ಜಿಡ್ಡುಜಿಡ್ಡಾಗಿ ಕಾಣುವಂತೆ ಮಾಡುತ್ತದೆ ಮತ್ತು ಮೊಡವೆ ಮೂಡಲು ಕಾರಣವಾಗುತ್ತದೆ. ಇದಕ್ಕೆ ಮಾಡಬಹುದಾದ ಅತ್ಯುತ್ತಮ ಮನೆಮದ್ದೆಂದರೆ ಟೊಮೆಟೊ ಹಣ್ಣನ್ನು ಮಿಕ್ಸಿ ಮಾಡಿ ಅದರ ರಸವನ್ನು ಬೌಲ್ ಗೆ ಹಾಕಿ. ಇದಕ್ಕೆ ಒಂದು ಚಮಚ ಮುಲ್ತಾನಿ ಮಿಟ್ಟಿ, ಚಿಟಿಕೆ ಅರಶಿನ ಹಾಕಿ ಮಿಕ್ಸ್ ಮಾಡಿ. ರೋಸ್ ವಾಟರ್ ನಾಲ್ಕು ಹನಿ ಹಾಕಿ. ಇದನ್ನು ನಿತ್ಯವೂ ಮುಖಕ್ಕೆ ಹಚ್ಚಿ.
ಅಲೊವೆರಾ ಜೆಲ್ ಗೆ ರೋಸ್ ವಾಟರ್ ಹಾಕಿ ಪೇಸ್ಟ್ ರೂಪಕ್ಕೆ ಬಂದ ಬಳಿಕ ಮುಖಕ್ಕೆ ಹಚ್ಚಿಕೊಳ್ಳುವುದರಿಂದಲೂ ಮುಖದ ರಂಧ್ರಗಳು ಮಾಯವಾಗುತ್ತವೆ.
ಇದನ್ನು ಹಚ್ಚಿ ತೆಗೆದ ಬಳಿಕ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ರಿಂಕಲ್ ಗಳು, ಮೊಡವೆಗಳು ದೂರವಾಗುತ್ತವೆ. ನಿಮ್ಮ ಮುಖವೂ ತಾಜಾ ಆಗಿ ಕಾಣಿಸಿಕೊಳ್ಳುತ್ತದೆ.