ನಿಮ್ಮ ಬಾತ್ ಟವಲ್ ಮೃದುತ್ವ ಕಳೆದುಕೊಂಡು ಗಡುಸಾಗಿದೆಯೇ, ಮೈ ಕೈ ಒರೆಸುವಾಗ ಹಿತವಾದ ಅನುಭವ ಆಗುವ ಬದಲು ಕಿರಿಕಿರಿಯಾಗುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ.
ಹೊಸ ಟವಲ್ ಆಗಿದ್ದರೂ ನಾಲ್ಕಾರು ಬಾರಿ ಬಳಸಿದ ಬಳಿಕ ಅದರ ಮೃದುತ್ವ ದೂರವಾಗಿ ಬಿಡುತ್ತದೆ. ಅದನ್ನು ಮರಳಿ ಪಡೆಯಲು ಬಾತ್ ಟವಲ್ ಅನ್ನು ಬೆಚ್ಚಗಿನ ನೀರಿನಲ್ಲೇ ತೊಳೆಯಬೇಕು. ಲಿಕ್ವಿಡ್ ಡಿಟರ್ಜೆಂಟ್ ಬದಲು ಬಿಳಿ ವಿನೆಗರ್ ಬಳಸಿ. ಇದು ಬಟ್ಟೆಯನ್ನು ಮೃದುವಾಗಿಡುತ್ತದೆ.
ತೊಳೆಯುವಾಗ ಬೇಕಿಂಗ್ ಸೋಡಾ ಬಳಸುವುದರಿಂದಲೂ ಬಟ್ಟೆಯನ್ನು ಮೃದುವಾಗಿಸಬಹುದು. ನಿಮ್ಮ ನಿತ್ಯದ ಡಿಟರ್ಜೆಂಟ್ ಜೊತೆ ಅರ್ಧ ಚಮಚ ಅಡುಗೆ ಸೋಡಾ ಬಳಸಿ. ಇದು ವಾಸನೆಯನ್ನೂ ಹೋಗಲಾಡಿಸುತ್ತದೆ.
ಟವೆಲ್ ತೊಳೆದ ಬಳಿಕ ಸರಿಯಾಗಿ ಹಿಂಡಿ. ಗಾಳಿಯಲ್ಲಿ ಒಣಗಿಸಿ. ಡ್ರೈಯರ್ ನಿಂದ ತೆಗೆದ ಬಳಿಕ ಸರಿಯಾಗಿ ಕೊಡವಿ. ಒಣಗಿಸಲು ಸ್ಥಳವಿಲ್ಲ ಎಂಬ ಕಾರಣಕ್ಕೆ ಯಾವುದೋ ಬಟ್ಟೆಯ ಮೇಲೆ ಹಾಕದಿರಿ. ಸರಿಯಾಗಿ ಒಣಗಿಸುವುದು ಕೂಡಾ ಬಹುಮುಖ್ಯ.