ಬೇಸಿಗೆಯಲ್ಲಿ ಶರೀರದ ಉಷ್ಣಾಂಶ ಏರಿಕೆಯಾಗುವುದು ಸಹಜ. ಇದರಿಂದ ಶರೀರದಲ್ಲಿ ತ್ವಚೆಯ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಮೂಡುತ್ತವೆ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟು ನಿಮ್ಮ ಶರೀರವು ಹೆಚ್ಚು ಉಷ್ಣಾಂಶವನ್ನು ಹೊರಗೆ ಹಾಕುತ್ತದೆ. ಬಿಸಿಲು ತಾಪಕ್ಕೆ ಶರೀರ ಆಯಾಸಗೊಳ್ಳುವುದಿಲ್ಲ. ಪ್ರತಿದಿನವೂ ಕನಿಷ್ಠ 8 ಲೋಟ ನೀರನ್ನು ಕುಡಿಯಬೇಕು.
ಬೇಸಿಗೆ ಅವಧಿಯಲ್ಲಿ ತಿನ್ನಲೇಬೇಕಾದ ಹಣ್ಣು ಅಂದರೆ ಕಲ್ಲಂಗಡಿ. ಇದರಲ್ಲಿ ನೀರು, ನಾರಿನಂಶ, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿವೆ. ಕರ್ಬುಜ ಹಣ್ಣಿನಲ್ಲೂ ಹೇರಳವಾದ ನೀರಿನ ಅಂಶವಿದೆ. ಮೆಂತೆಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.
ಹೆಚ್ಚು ಖಾರವಿರುವ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ. ಆದಷ್ಟೂ ಸೊಪ್ಪು, ತರಕಾರಿ, ಸೌತೆಕಾಯಿ, ಮೊಸರು ಇವುಗಳನ್ನು ಸೇವಿಸಿ. ಎಳನೀರು, ಬಾರ್ಲಿ ನೀರನ್ನು ಕುಡಿಯಿರಿ.