ಕೂದಲಿಗೆ ಬಣ್ಣ ಹಚ್ಚುವಾಗ ಕೆಲವೊಮ್ಮೆ ಚರ್ಮದ ಮೇಲೆ ಬೀಳುತ್ತದೆ. ಇದು ಕೆಲವೊಮ್ಮೆ ಚರ್ಮಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಕೂದಲಿಗೆ ಬಣ್ಣ ಮಾಡುವಾಗ ನಿಮ್ಮ ಚರ್ಮವನ್ನು ಕಲೆಗಳಿಂದ ರಕ್ಷಿಸಲು ಈ ಸಲಹೆಗಳನ್ನು ಪಾಲಿಸಿ.
ನಿಮ್ಮ ಚರ್ಮದ ಮೇಲೆ ಬಣ್ಣ ಬಿದ್ದಾಗ ಅದನ್ನು ಸೋಪ್ ಅಥವಾ ನೈಲ್ ರಿಮೂವರ್ ನಂತಹ ರಾಸಾಯನಿಕ ವಸ್ತುಗಳಿಂದ ಕ್ಲೀನ್ ಮಾಡಬೇಡಿ. ಇದು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ಕಿರಿಕಿರಿಯನ್ನುಂಟುಮಾಡುತ್ತದೆ. ಬದಲಾಗಿ ವ್ಯಾಸಲಿನ್, ಆಲಿವ್ ಆಯಿಲ್ ಅನ್ನು ಬಳಸಿ.
ಹಾಗೇ ಕೂದಲಿಗೆ ಬಣ್ಣ ಮಾಡುವ ಮುನ್ನ ವ್ಯಾಸಲಿನ್ ಅಥವಾ ಆಲಿವ್ ಎಣ್ಣೆಯನ್ನು ಮುಖ, ಕುತ್ತಿಗೆ, ಕಿವಿ, ತಲೆಯ ಹಿಂಭಾಗ ಮತ್ತು ಕೈಗಳಿಗೆ ಅನ್ವಯಿಸಿ. ಇದರಿಂದ ಚರ್ಮದ ಮೇಲೆ ಬಣ್ಣ ಬಿದ್ದಾಗ ಸುಲಭವಾಗಿ ಕ್ಲೀನ್ ಮಾಡಬಹುದು ಮತ್ತು ಚರ್ಮದ ಮೇಲೆ ಹಾನಿಯುಂಟಾಗುವುದಿಲ್ಲ.