alex Certify ಮೆದುಳಿನ ಗಡ್ಡೆಗಳ ಸಮಸ್ಯೆಯನ್ನು ತಡೆಯಲು ಪಾಲಿಸಿ ಈ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆದುಳಿನ ಗಡ್ಡೆಗಳ ಸಮಸ್ಯೆಯನ್ನು ತಡೆಯಲು ಪಾಲಿಸಿ ಈ ಸಲಹೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಮೆದುಳಿನ ಗಡ್ಡೆಯ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಒಳಗಾದ ಜನರು ಅತಿಯಾದ ತಲೆನೋವಿನಿಂದ ನರಳುತ್ತಾರೆ. ಇದು ಮುಂದೆ ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಿ ಜೀವಕ್ಕೆ ಅಪಾಯವಾಗಬಹುದು. ಹಾಗಾಗಿ ಈ ಮೆದುಳಿನ ಗಡ್ಡೆಗಳು ಬೆಳೆಯದಂತೆ ಎಚ್ಚರವಹಿಸಿ. ಅದಕ್ಕಾಗಿ ಈ ಸಲಹೆ ಪಾಲಿಸಿ.

ಯೋಗ : ಮೆದುಳಿನ ಗಡ್ಡೆಗಳನ್ನು ತಡೆಯಲು ಯೋಗ ಬಹಳ ಸಹಕಾರಿಯಾಗಿದೆ. ಹಾಗಾಗಿ ಪ್ರತಿದಿನ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಗಡ್ಡೆಗಳ ಸಮಸ್ಯೆ ಕಾಡುವುದಿಲ್ಲ.

ನಿದ್ರೆ : ನಿದ್ರೆ ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ವಿಶ್ರಾಂತಿಯನ್ನು ನೀಡುತ್ತದೆ. ಹಾಗಾಗಿ ದಿನಕ್ಕೆ ಸಾಕಷ್ಟು ನಿದ್ರೆ ಮಾಡಬೇಕು. ರಾತ್ರಿ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸಿ. ಹಾಗೇ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ ಮತ್ತು ಬೆಳಿಗ್ಗೆ ಬೇಗ ಎದ್ದೇಳಿ. ಇದರಿಂದ ನರಮಂಡಲ ಆರೋಗ್ಯವಾಗಿರುತ್ತದೆ. ಮತ್ತು ಮೆದುಳಿನಲ್ಲಿ ಗಡ್ಡೆಗಳ ಸಮಸ್ಯೆ ದೂರವಾಗುತ್ತದೆ.

ಆಹಾರ : ಮೆದುಳು ಆರೋಗ್ಯವಾಗಿರಲು ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಿ. ಇಂತಹ ಆಹಾರಗಳು ಮೆದುಳಿನ ಕಾರ್ಯದಲ್ಲಿ ಅಡ್ಡಿಯನ್ನುಂಟುಮಾಡುತ್ತದೆ. ಇದರಿಂದ ಗಡ್ಡೆಗಳ ಸಮಸ್ಯೆ ಕಾಡಬಹುದು. ಹಾಗಾಗಿ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ. ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ. ಇದು ಮೆದುಳಿನಲ್ಲಿ ಗಡ್ಡೆಗಳು ಬೆಳೆಯದಂತೆ ತಡೆಯುತ್ತವೆ.

ತಂಬಾಕು ಸೇವನೆ : ತಂಬಾಕು ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಧೂಮಪಾನ ಸೇವನೆಯನ್ನು ತಪ್ಪಿಸಿ.

ತೂಕ ನಿಯಂತ್ರಣ: ನೀವು ಉತ್ತಮ ತೂಕವನ್ನು ಕಾಯ್ದುಕೊಳ್ಳಬೇಕು. ಯಾಕೆಂದರೆ ತೂಕ ಹೆಚ್ಚಳದಿಂದ ಅನೇಕ ಕಾಯಿಲೆಗಳು ಸಂಭವಿಸುತ್ತದೆ. ಹಾಗಾಗಿ ದೇಹದ ತೂಕದ ಮೇಲೆ ನಿಯಂತ್ರಣವಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...