alex Certify ನಿಮ್ಮನೆ ಗುಲಾಬಿ ಗಿಡದಲ್ಲೂ ತುಂಬ ಹೂ ಅರಳಬೇಕೆಂದರೆ ಅನುಸರಿಸಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನೆ ಗುಲಾಬಿ ಗಿಡದಲ್ಲೂ ತುಂಬ ಹೂ ಅರಳಬೇಕೆಂದರೆ ಅನುಸರಿಸಿ ಈ ಟಿಪ್ಸ್

ಮನೆಮುಂದೆ ಚಿಕ್ಕದೊಂದು ಹೂವಿನ ತೋಟ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಗುಲಾಬಿ ಹೂವಿದ್ದರೆ ಮತ್ತಷ್ಟೂ ಚೆಂದ. ಗುಲಾಬಿ ಗಿಡವನ್ನು ಎಷ್ಟೇ ಚೆನ್ನಾಗಿ ಆರೈಕೆ ಮಾಡಿದರೂ ಸರಿಯಾಗಿ ಹೂ ಬಿಡುವುದಿಲ್ಲ ಎಂಬ ಬೇಜಾರು ನಿಮಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ನೋಡಿ.

ನಾಲ್ಕು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಇದನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಗೆ 2 ಗ್ಲಾಸ್ ನೀರು ಹಾಕಿ ಅದು ಚೆನ್ನಾಗಿ ಕುದಿಯಲಿ. ನಂತರ ಅದಕ್ಕೆ ಈ ಬಾಳೆಹಣ್ಣಿನ ಸಿಪ್ಪೆ ಹಾಕಿ. ಅದೇ ನೀರಿಗೆ 2 ಚಮಚದಷ್ಟು ಕಾಫಿ ಪುಡಿ ಹಾಕಿ.

ನಂತರ ಅದಕ್ಕೆ 5 ಚಮಚದಷ್ಟು ಟೀ ಮಾಡಿದ ನಂತರ ಸೋಸಿಕೊಂಡು ಉಳಿದ ಟೀ ಪುಡಿಯನ್ನು ಹಾಕಿ. ¼ ಕಪ್ ನಷ್ಟು ಹಾಲು ಸೇರಿಸಿ ಗ್ಯಾಸ್ ಆಫ್ ಮಾಡಿ ಒಂದು ಪ್ಲೇಟ್ ಅನ್ನು ಮುಚ್ಚಿ. ರಾತ್ರಿಯಿಡೀ ಇದು ಹಾಗೆಯೇ ಇರಲಿ. ನಂತರ ಹೂವಿನ ಗಿಡದ ಬುಡಕ್ಕೆ ಈ ನೀರನ್ನು ಹಾಕಿ. ಇದರಿಂದ ಗುಲಾಬಿ ಗಿಡದಲ್ಲಿ ಚೆನ್ನಾಗಿ ಹೂ ಬಿಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...