ಉದ್ಯೋಗ ಮಾಡುವ ತಾಯಿಯ ಜವಾಬ್ದಾರಿ ಹೆಚ್ಚಿರುತ್ತದೆ. ಮನೆ, ಮಕ್ಕಳು ಹಾಗೆ ಕೆಲಸ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಕಚೇರಿಗೆ ಹೋದ್ರೂ ಮನೆ ಚಿಂತೆ ಕಾಡುತ್ತದೆ. ಆಗ ಕಚೇರಿ ಕೆಲಸವನ್ನು ಸರಿಯಾಗಿ ಮಾಡಲು ಆಗುವುದಿಲ್ಲ. ಎರಡನ್ನೂ ಸರಿಯಾಗಿ ನಿಭಾಯಿಸಬೇಕೆಂದ್ರೆ ಕೆಲವೊಂದು ಟಿಪ್ಸ್ ಪಾಲಿಸಬೇಕು.
ಕೆಲಸಕ್ಕೆ ಹೋಗುವ ಗೃಹಿಣಿಯರು ಮಗುವಿನ ಕೆಲಸವನ್ನು ಮನೆಯಲ್ಲಿರುವ ಎಲ್ಲರಿಗೂ ಹಂಚಬೇಕು. ಮಗು ಹೆಚ್ಚಿನ ಸಮಯ ಮೊಬೈಲ್, ಟಿವಿ ನೋಡದೇ ಇರುವಂತೆ ನಿಗಾ ವಹಿಸಬೇಕು.
ವರ್ಕಿಂಗ್ ವುಮನ್ ನೀವಾಗಿದ್ದಲ್ಲಿ ನಿಮ್ಮ ಕೆಲಸದ ಸಮಯ ಮುಗಿದು ನೀವು ಫ್ರೀ ಇರುವಾಗ ಮನೆಗೆ ಫೋನ್ ಮಾಡಿ, ಮಗುವಿನೊಂದಿಗೆ ಮಾತನಾಡಿ. ಇದರಿಂದ ನಿಮಗೂ ನೆಮ್ಮದಿ ಇರುತ್ತದೆ ಮತ್ತು ಮಗುವಿಗೂ ಖುಷಿಯಾಗುತ್ತದೆ.
ಕಚೇರಿಗೆ ಹೋಗುವ ಮಹಿಳೆಯರಿಗೆ ಕೆಲವೊಮ್ಮೆ ಮನೆ, ಆಫೀಸ್ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಿರುವಾಗ ನೀವು ಕೆಲವೊಂದು ಕೆಲಸವನ್ನು ಪತಿಗೆ ವಹಿಸಿಕೊಡಿ. ಇದರಿಂದ ನಿಮಗೂ ಆರಾಮ ಸಿಗುತ್ತದೆ ಮತ್ತು ತಂದೆ-ಮಕ್ಕಳ ನಡುವೆ ಬಾಂಡಿಂಗ್ ಬೆಳೆಯುತ್ತದೆ.
ತಂದೆ – ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಾಗ ಮಕ್ಕಳ ಜೊತೆ ಸ್ಟ್ರಾಂಗ್ ರಿಲೇಶನ್ಶಿಪ್ ಉಂಟಾಗುವುದಿಲ್ಲ. ಅಂತ ಸಂದರ್ಭದಲ್ಲಿ ನೀವು ಕಚೇರಿಯಿಂದ ಮನೆಗೆ ಹೋಗುವಾಗ ಮಕ್ಕಳಿಗೋಸ್ಕರ ಏನಾದರೂ ಸ್ಪೆಶಲ್ ಗಿಫ್ಟ್ ಅಥವಾ ಅವರ ಇಷ್ಟದ ತಿನಿಸನ್ನು ತೆಗೆದುಕೊಂಡು ಹೋಗಬಹುದು. ವಾರದ ಕೊನೆಯಲ್ಲಿ ಕುಟುಂಬದ ಜೊತೆ ಹೊರಗೆ ಸುತ್ತಾಡುವುದರಿಂದಲೂ ಮಕ್ಕಳು ಖುಷಿಯಾಗಿರುತ್ತಾರೆ. ಹೊರಗಡೆ ಹೋಗದೇ ಇದ್ದಲ್ಲಿ ಮನೆಯಲ್ಲೇ ಮಕ್ಕಳಿಗೆ ಬೇಕಾದ ತಿಂಡಿಯನ್ನು ತಯಾರಿಸಬಹುದು.