ಆಧುನಿಕ ಜೀವನಶೈಲಿಯಿಂದಾಗಿ ಒತ್ತಡದಲ್ಲೇ ಬದುಕುವ ಅನಿವಾರ್ಯತೆ ಇಂದು ಮಾಮೂಲಿಯಾಗಿದೆ. ಟೆನ್ ಷನ್, ಹೈಪರ್ ಟೆನ್ ಷನ್, ಅತಿಯಾದ ಮಾನಸಿಕ ಚಿಂತೆ, ಅನುವಂಶೀಯತೆ, ವಿಟಮಿನ್ ಕೊರತೆ, ಅಪೌಷ್ಠಿಕ ಆಹಾರ ಸೇವನೆಯಿಂದ ತಲೆ ಕೂದಲು ಬೆಳ್ಳಗಾಗುತ್ತವೆ.
ಇವುಗಳ ಜೊತೆಗೆ ಕೆಲವೊಮ್ಮೆ ಒಂದು ನಿರ್ದಿಷ್ಟ ವಯಸ್ಸಿನ ನಂತರದಲ್ಲಿ ಕೂದಲು ಬಿಳಿಯಾಗುವುದುಂಟು. ನಿಯಮಿತವಾಗಿ ತಲೆ ಸ್ನಾನ ಮಾಡದಿರುವುದು, ತಲೆಗೆ ಎಣ್ಣೆ ಹಾಕದಿರುವುದು ಕೂಡ ಕಾರಣವಾಗಬಹುದಾದ ಸಾಧ್ಯತೆ ಇರುತ್ತದೆ.
ಕೂದಲು ಬೆಳ್ಳಗಾದರೆ ವಯಸ್ಸಾದವರಂತೆ ಕಾಣುತ್ತಾರೆ. ಅದರಿಂದ ಪಾರಾಗಲು ಈ ರೀತಿ ಮಾಡಬಹುದು. ತಲೆಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಿ ನಂತರ ಹೇರ್ ಡೈ ಬಳಸಿ. ಸ್ವಲ್ಪ ಸಮಯ ಬಿಟ್ಟು ಪುನಃ ಸ್ನಾನ ಮಾಡಿ. ಇದರಿಂದ ನಿಮ್ಮ ವಯಸ್ಸು 10 ವರ್ಷ ಕಡಿಮೆಯಾದಂತೆ ಕಾಣುತ್ತದೆ.
ಹೇರ್ ಡೈ ರಾಸಾಯನಿಕ ದ್ರವ್ಯವಾಗಿದ್ದು, ಅದನ್ನು ಬಳಸುವಾಗ ಎಚ್ಚರಿಕೆ ಇರಲಿ. ಸರಿಯಾದ ರೀತಿಯಲ್ಲಿ ಅದನ್ನು ಬಳಸದಿದ್ದರೆ, ರಾಸಾಯನಿಕ ಚರ್ಮದ ಮೇಲೆ ಬಿದ್ದು ಕೆಲವೊಮ್ಮೆ ಹಾನಿಯಾಗಬಹುದಾದ ಸಾಧ್ಯತೆ ಇರುತ್ತದೆ. ಎಲ್ಲಾ ಹೇರ್ ಡೈ ಎಲ್ಲರಿಗೂ ಹೊಂದುವುದಿಲ್ಲ. ಕೆಲವರಿಗೆ ಅಲರ್ಜಿ ಆಗಬಹುದಾಗಿರುತ್ತದೆ. ಬಳಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಹಾಗೇ ಮುಖಕ್ಕೆ ನಿಮಗೆ ಸೂಕ್ತವಾದ ಯಾವುದಾದರೂ ಫೇಸ್ ಪ್ಯಾಕ್ ಬಳಸುತ್ತಾ ಇರಿ.