alex Certify ನೀವು ಮೇಕಪ್ ಇಲ್ಲದೆಯೂ ಅಂದವಾಗಿ ಕಾಣಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಮೇಕಪ್ ಇಲ್ಲದೆಯೂ ಅಂದವಾಗಿ ಕಾಣಲು ಫಾಲೋ ಮಾಡಿ ಈ ಟಿಪ್ಸ್

ಮಹಿಳೆಯರು ಮೇಕಪ್ ಇಲ್ಲದೆ ಹೊರಗೆ ಹೋಗುವುದಿಲ್ಲ. ಮೇಕಪ್  ಮುಖದಲ್ಲಿರುವ ಸಮಸ್ಯೆಗಳು ಮರೆಮಾಚುತ್ತದೆ. ಹಾಗಾಗಿ ಮಹಿಳೆಯರು ಪ್ರತಿಬಾರಿ ಹೊರಗೆ ಹೋಗುವಾಗ ಮೇಕಪ್ ಮಾಡುತ್ತಾರೆ. ಮೇಕಪ್ ಇಲ್ಲದೇ ನಾವು ಅಂದವಾಗಿ ಕಾಣುವುದಿಲ್ಲ ಎಂಬುದು ಅವರ ಭಾವನೆ. ಆದರೆ ಮೇಕಪ್ ಇಲ್ಲದೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ.

*ಹೊರಗೆ ಬರುವ 15 ನಿಮಿಷಕ್ಕೆ ಮೊದಲು ನೀವು ಯಾವಾಗಲೂ ಸನ್ ಸ್ಕ್ರೀನ್ ಅನ್ನು ಮುಖ, ಕೈಗೆ ಹಚ್ಚಿ.

*ನಿಮ್ಮ ಮುಖದ ತ್ವಚೆ ಮೃದುವಾಗಿ, ಕೋಮಲವಾಗಿ ಹೊಳೆಯುತ್ತಿರಲು ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ.

*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸಿ. ಇದು ದೇಹದ ವಿಷವನ್ನು ಹೊರಹಾಕುತ್ತದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

*ಚರ್ಮದ ಸತ್ತ ಜೀವಕೋಶಗಳನ್ನು ತೊಡೆದು ಹಾಕಲು ವಾರದಲ್ಲಿ ಒಂದು ಬಾರಿ ಮುಖಕ್ಕೆ ಸ್ಕ್ರಬ್ ಬಳಸಿ.

*ಪ್ರತಿದಿನ ಮುಖಕ್ಕೆ ಟೋನರ್ ನ್ನು ಬಳಸಿ. ಇದು ಚರ್ಮದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

*ಚರ್ಮವನ್ನು ಹೈಡ್ರೀಕರಿಸಿ. ಅದಕ್ಕಾಗಿ ಪ್ರತಿದಿನ ಸರಿಯಾಗಿ ನೀರನ್ನು ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...