ಉಪವಾಸದ ಸಮಯದಲ್ಲಿ ಕಡಲೆಕಾಯಿಯನ್ನು ಸೇವಿಸಲಾಗುತ್ತದೆ. ಕೆಲವರು ಕಡಲೆಕಾಯಿಯನ್ನು ಹುರಿದು ಇಡುತ್ತಾರೆ. ಆದರೆ ಅದು ಗಾಳಿಯ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ. ಹಾಗಾಗಿ ನೀವು ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಮತ್ತು ಗರಿಗರಿಯಾಗಿಡಲು ಬಯಸಿದರೆ ಅದನ್ನು ಸಂಗ್ರಹಿಸುವಾಗ ಮತ್ತು ಹುರಿಯುವಾಗ ಈ ಸಲಹೆ ಪಾಲಿಸಿ.
ಕಡಲೆಕಾಯಿಯನ್ನು ಸಂಗ್ರಹಿಸುವಾಗ ಅದರ ಪೊರೆಯನ್ನು ತೆಗೆದುಹಾಕಿ. ಇದರಿಂದ ಅದು ದೀರ್ಘಕಾಲ ಗರಿಗರಿಯಾಗಿ, ರುಚಿಕರವಾಗಿರುತ್ತದೆ. ಮತ್ತು ಅದನ್ನು ದೀರ್ಘಕಾಲ ಇಡುವುದಾದರೆ ಉಪ್ಪು ಮತ್ತು ಮಸಾಲೆ ಸೇರಿಸಬೇಡಿ. ಹಾಗೇ ಹುರಿದ ಕಡಲೆಕಾಯಿಯನ್ನು ಬಿಸಿ ಇರುವಾಗಲೇ ಸಂಗ್ರಹಿಸಬೇಡಿ.
ಅದನ್ನು ಪೇಪರ್ ನಲ್ಲಿ ಹಾಕಿ ತಣ್ಣಗಾದ ಮೇಲೆ ಜಿಪ್ ಪೌಚ್ ನಲ್ಲಿ ಮುಚ್ಚಿ ಗಾಳಿಯಾಡದಂತೆ ಇಡಿ. ಕಡಲೆಕಾಯಿಯನ್ನು ಪ್ಲಾಸ್ಟಿಕ್ ಬಾಟಲಿನಲ್ಲಿ ಸಂಗ್ರಹಿಸುವ ಬದಲು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಡಿ. ಇದರಿಂದ ಅದು ಗರಿಗರಿಯಾಗಿರುತ್ತದೆ. ಹಾಗೇ ದೊಡ್ಡ ಪಾತ್ರೆಯಲ್ಲಿ ಕಡಲೆಕಾಯಿ ಸಂಗ್ರಹಿಸಬೇಡಿ. ಕಡಲೆಕಾಯಿ ಪ್ರಮಾಣಕ್ಕೆ ಅನುಗುಣವಾದ ಪಾತ್ರೆಯಲ್ಲಿ ಸಂಗ್ರಹಿಸಿ.