ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ದೇಹದ ಆರೋಗ್ಯ ಕಾಪಾಡಲು ಈ ಕೆಳಗಿನ ಆಹಾರಗಳನ್ನು ಮರೆಯದೆ ಸೇವಿಸಿ.
ಚಳಿ ಎಂಬ ಕಾರಣಕ್ಕೆ ಸಾಕಷ್ಟು ನೀರು ಕುಡಿಯುವುದನ್ನು ತಪ್ಪಿಸದಿರಿ. ದ್ವಿದಳ ಧಾನ್ಯ ಸೇವಿಸಿ. ಇದರಲ್ಲಿ ಉತ್ತಮ ಪ್ರಮಾಣದ ಸತು ಹಾಗೂ ಕಡಿಮೆ ಕ್ಯಾಲೊರಿಗಳಿದ್ದು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.
ಬಡವರ ಬಾದಾಮಿ ಎಂದೇ ಪ್ರಸಿದ್ಧಿ ಪಡೆದಿರುವ ಕಡಲೆಕಾಯಿಯನ್ನು ಸೇವಿಸಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಸಿಯಾಗಿಯೂ ತುಸು ಉಪ್ಪು ಬೆರೆಸಿಯೂ ಇದನ್ನು ಸೇವಿಸುವುದು ಒಳ್ಳೆಯದು.
ಒಣಹಣ್ಣುಗಳು ಅದರಲ್ಲೂ ಮುಖ್ಯವಾಗಿ ಗೋಡಂಬಿ, ಬಾದಾಮಿ ಹಾಗು ಒಣ ದ್ರಾಕ್ಷಿಗಳನ್ನು ನಿತ್ಯ ನಿಯಮಿತ ಪ್ರಮಾಣದಲ್ಲಿ ಸೇವಿಸಿ. ಕಲ್ಲಂಗಡಿ ಹಣ್ಣು ಮತ್ತು ಅದರ ಬೀಜವನ್ನು ಆಹಾರದಲ್ಲಿ ಬಳಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದರ ಬೀಜವನ್ನು ಎರಡರಿಂದ ಮೂರು ಚಮಚದಷ್ಟು ಸೇವಿಸುವುದು ಒಳ್ಳೆಯದು.