ಕೆಲವರು ಒಣ ಹಾಗೂ ಆಯಿಲ್ ಮಿಶ್ರಿತ ತ್ವಚೆಯನ್ನು ಹೊಂದಿರುತ್ತಾರೆ. ಇಂತವರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಹಲವು ಚರ್ಮದ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಒಣ ಹಾಗೂ ಆಯಿಲ್ ಮಿಶ್ರಿತ ತ್ವಚೆ ಹೊಂದಿರುವವರು ತ್ವಚೆಯ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.
*ದಪ್ಪವಾದ ಮಾಯಿಶ್ಚರೈಸರ್ ಕ್ರೀಂನ್ನು ಬಳಸಬೇಡಿ. ಇದು ಚರ್ಮದ ಮೇಲೆ ಜಿಗುಟಾದ ಪದರವನ್ನು ರಚಿಸುತ್ತದೆ.
*ಸ್ಯಾಲಿಸಿಲಿಕ್ ಆಸಿಡ್ ಕ್ಲೆನ್ಸರ್ ಗಳನ್ನು ಬಳಸಬೇಡಿ. ಇದು ನಿಮ್ಮ ಚರ್ಮವನ್ನು ಕಠಿಣವಾಗಿ ಮಾಡುತ್ತದೆ.
*ಆಲ್ಕೋಹಾಲ್ ಆಧಾರಿತ ಟೋನರ್ ಗಳನ್ನು ತಪ್ಪಿಸಿ. ಇವು ಎಣ್ಣೆಯನ್ನು ಉಂಟುಮಾಡಬಹುದು. ಇದು ಚರ್ಮದ ಪಿಎಚ್ ಸಮತೋಲನವನ್ನು ಹಾನಿಗೊಳಿಸುತ್ತದೆ.
*ತೈಲಗಳನ್ನು ಮುಖಕ್ಕೆ ಬಳಸಬೇಡಿ, ಜೆಲ್ ಉತ್ಪನ್ನಗಳನ್ನು ಮಾತ್ರ ಬಳಸಿ.