
ಕೆಲವರು ಫ್ರಿಜ್ ನಲ್ಲಿ ವಸ್ತುಗಳನ್ನು ಸ್ಟೋರ್ ಮಾಡಿ ಇಡಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನುಬಳಸುತ್ತಾರೆ. ಇವುಗಳನ್ನು ಹೆಚ್ಚು ಕಾಲ ಬಳಸುವುದರಿಂದ ಅದರಲ್ಲಿ ಕಲೆಗಳು ಉಂಟಾಗಿ ವಾಸನೆ ಬರುತ್ತದೆ. ಹಾಗಾಗಿ ಕಲೆಗಳನ್ನು ತೆಗೆದು ವಾಸನೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
*ಪ್ಲಾಸ್ಟಿಕ್ ಪಾತ್ರೆಗಳ ಕಲೆಗಳನ್ನು ತೆಗೆಯಲು ವಿನೆಗರ್ ಬಳಸಬಹುದು. ಇದು ಪ್ಲಾಸ್ಟಿಕ್ ಬಾಕ್ಸ್ ಗಳನ್ನು ಹೊಸದರಂತೆ ಮಾಡುತ್ತದೆ. ಪ್ಲಾಸ್ಟಿಕ್ ಪಾತ್ರೆಗಳ ಮೇಲೆ ವಿನೆಗರ್ ಸಿಂಪಡಿಸಿ ಸ್ವಲ್ಪ ಸಮಯದವರೆಗೆ ಬಿಡಿ. ಬಳಿಕ ಸ್ಕ್ರಬ್ ಮಾಡಿ ವಾಶ್ ಮಾಡಿ. ಇದರಿಂದ ಬಾಕ್ಸ್ ಗಳಲ್ಲಿರುವ ದುರ್ವಾಸನೆ ಹೋಗಿ ಬಾಕ್ಸ್ ಹೊಳೆಯುತ್ತದೆ.
*ಅಡುಗೆ ಸೋಡಾವನ್ನು ಬಳಸಿ ಪ್ಲಾಸ್ಟಿಕ್ ಪಾತ್ರೆಗಳ ಹೊಳಪು ಹೆಚ್ಚಿಸಬಹುದು. ಇದಕ್ಕಾಗಿ ನೀವು ಬಿಸಿ ನೀರಿನಲ್ಲಿ 3-4 ಚಮಚ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಾತ್ರೆಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಸ್ಕ್ರಬ್ ನಿಂದ ಉಜ್ಜಿ ಸ್ವಚ್ಛ ನೀರಿನಿಂದ ವಾಶ್ ಮಾಡಿ.