ಕೆಲವು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕ್ಷೌರ ಮಾಡಿಸಿದಾಗ ಬ್ಲೇಡ್ ಬಳಸಿದ ಕಡೆಗಳಲ್ಲಿ ಗುಳ್ಳೆಗಳು, ತುರಿಕೆ, ಚರ್ಮ ಕೆಂಪಾಗುತ್ತದೆ. ಇದನ್ನು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
ಕ್ಷೌರ ಮಾಡಿಸಿದಾಗ ಕುತ್ತಿಗೆ, ತಲೆಯಲ್ಲಿ ದದ್ದುಗಳು ಮೂಡಿದ್ದರೆ ತಂಪಾದ ನೀರಿನಲ್ಲಿ ಕ್ಲೀನ್ ಮಾಡಿ ಆಂಟಿ ಬ್ಯಾಕ್ಟೀರಿಯಲ್ ಸೋಪ್ ಗಳಿಂದ ವಾಶ್ ಮಾಡಿ. ಬಳಿಕ ಕೂದಲಿಗೆ ಎಣ್ಣೆ ಹಚ್ಚಿ ಮತ್ತು ಬ್ಲೇಡ್ ತಾಗಿ ಕೆಂಪಾದ ಕಡೆಗಳಲ್ಲಿ ಅಲೊವೆರಾ ಜೆಲ್ ಹಚ್ಚಿ.
ಹಾಗೇ ಕ್ಷೌರ ಮಾಡುವಾಗ ನಿಮ್ಮ ಚರ್ಮವನ್ನು ಬಿಗಿಯಾಗಿ ಬಿಗಿಯಾಗಿ ಹಿಡಿದುಕೊಳ್ಳಬೇಡಿ. ಸೋಂಕುಗಳನ್ನು ತಡೆಗಟ್ಟಲು ಸ್ವಚ್ಚವಾದ ಬ್ಲೇಡ್ ಗಳನ್ನು ಬಳಸಿ. ಹಾಗೂ ಹಳೆಯದಾದ, ಮೊಂಡಾದ ವಸ್ತುಗಳನ್ನು ಬಳಸಬೇಡಿ. ಗಾಯಗಳಿದ್ದರೆ ಅದು ವಾಸಿಯಾಗುವ ತನಕ ಕ್ಷೌರ ಮಾಡಿಸಬೇಡಿ.