ದೀರ್ಘಕಾಲ ಮೊಬೈಲ್, ಟಿವಿ ಇಲ್ಲವೇ ಕಂಪ್ಯೂಟರ್ ಪರದೆ ವೀಕ್ಷಿಸಿದ ಪರಿಣಾಮ ನಿಮ್ಮ ಕಣ್ಣುಗಳು ಆಯಾಸಗೊಂಡಿರಬಹುದು. ಕಣ್ಣುಗಳಲ್ಲಿ ನೀರು ಸುರಿಯುವುದು, ಕೆಂಪಾಗುವುದು, ಮಂದವಾದ ದೃಷ್ಟಿಯಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಇಂತಹ ಸಂದರ್ಭದಲ್ಲಿ ನೀವು ಆತಂಕಕ್ಕೆ ಒಳಗಾಗಬೇಕಿಲ್ಲ. ನೀವು ಕೆಲಸ ಮಾಡುವ ಸ್ಥಳದಲ್ಲಿ ಅಕ್ಕ ಪಕ್ಕ ಯಾರೂ ಇಲ್ಲ ಎಂದಾದರೆ ಮಾಸ್ಕ್ ಸ್ವಲ್ಪ ಹೊತ್ತು ತೆಗೆದಿರಿಸಿ.
ನೀವು ಕನ್ನಡಕ ಧರಿಸುವವರಾದರೆ ಆರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಲು ಮರೆಯದಿರಿ. ಕನ್ನಡಕ ಬದಲಾಯಿಸುವ ಅಗತ್ಯ ಬಿದ್ದರೆ ಅದನ್ನು ಮುಂದೂಡದಿರಿ.
ಟಿಶ್ಯೂ ಪೇಪರ್ ಅನ್ನು ಸಣ್ಣದಾಗಿ ಮಡಿಚಿ ಮೂಗಿನ ಮೇಲ್ಭಾಗದಲ್ಲಿ ಬರುವಂತೆ ಇಟ್ಟುಕೊಳ್ಳಿ. ಆ ಬಳಿಕ ಮಾಸ್ಕ್ ಧರಿಸಿ. ಆಗ ಮೂಗಿನಿಂದ ಬರುವ ಬಿಸಿ ಗಾಳಿಯನ್ನು ತಡೆಯಬಹುದು. ಕಣ್ಣುಗಳಿಗೆ ಅಥವಾ ಕನ್ನಡಕಕ್ಕೆ ಹಬೆ ಕಟ್ಟುವುದನ್ನು ತಡೆಯಬಹುದು.