ಮಗು ಸರಿಯಾಗಿ ಊಟ ಮಾಡುದಿಲ್ಲ ಎಂಬ ದೂರು ಹೆಚ್ಚಿನ ತಾಯಂದಿರ ಬಾಯಲ್ಲಿ ಬರುವ ಮಾತು. ಕೆಲವು ಮಕ್ಕಳು ಊಟ ತಂದಾಕ್ಷಣ ಮುಖ ಸಿಂಡರಿಸುತ್ತವೆ. ಊಟವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು ಅಮ್ಮಂದಿರನ್ನು ಸತಾಯಿಸುತ್ತಾರೆ.
ಹೇಗೆ ಅಡುಗೆ ಮಾಡಿದರೂ ಮಗು ತಿನ್ನವುದಿಲ್ಲ. ತಿನ್ನಿಸುವುದೇ ದೊಡ್ಡ ತಲೆನೋವು ಎಂದು ತಲೆಬಿಸಿ ಮಾಡಿಕೊಳ್ಳುವ ಅಮ್ಮಂದಿರು ಈ ಟಿಪ್ಸ್ ಅನುಸರಿಸಿ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ತಿನ್ನಿಸಿ.
*ಮೊದಲಿಗೆ ಮಕ್ಕಳಿಗೆ ಊಟದ ಮೇಲೆ ಪ್ರೀತಿ ಬರುವಂತೆ ರುಚಿಯಾಗಿ, ಶುಚಿಯಾಗಿ ಮಾಡಬೇಕು. ಸ್ವಲ್ಪ ದೊಡ್ಡ ಮಕ್ಕಳಾದರೆ ಅವರಿಗೆ ಊಟದ ಕುರಿತು ಒಂದಷ್ಟು ಅರಿವು ಮೂಡಿಸಿ.
*ಹಾಗೇ ಮಕ್ಕಳಿಗೆ ಬಣ್ಣ ತುಂಬಾ ಇಷ್ಟ. ಹಾಗಾಗಿ ಕ್ಯಾರೆಟ್, ಬೀನ್ಸ್, ಬಿಟ್ರೂಟ್ ಇವುಗಳನ್ನೆಲ್ಲಾ ಬಳಸಿ ಅಡುಗೆ ಮಾಡಿಕೊಡಿ.
*ಇನ್ನು ನೀವು ಊಟ ಮಾಡುವಾಗ ಮಕ್ಕಳನ್ನು ನಿಮ್ಮೊಂದಿಗೆ ಕುಳ್ಳಿರಿಸಿಕೊಂಡು ಊಟ ತಿನ್ನಿಸಿ.
*ಟಿ.ವಿ, ಮೊಬೈಲ್ ತೋರಿಸಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಊಟ ತಿನ್ನಿಸಬೇಡಿ.
*ಇನ್ನು ಮಕ್ಕಳಿಗೆ ಏನು ಇಷ್ಟ ಎಂಬುದನ್ನು ತಿಳಿದು ಅದಕ್ಕೆ ತರಕಾರಿ, ಸೊಪ್ಪನ್ನು ಬಳಸಿ. ಉದಾಹರಣೆಗೆ ದೋಸೆ ಇಷ್ಟಪಡುವ ಮಕ್ಕಳಿಗೆ ಪಾಲಾಕ್ ದೋಸೆ, ಹೆಸರುಕಾಳು ದೋಸೆ ಮಾಡಿಕೊಡಿ.
ಇನ್ನು ಮಿನಿ ಇಡ್ಲಿ, ಮಿನಿ ದೋಸೆ ರೀತಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಪಟ್ಟು ತಿನ್ನುತ್ತಾರೆ.