ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ ತಿನ್ನುತ್ತಿದ್ದರೆ ಅದ್ರ ಮಜವೇ ಬೇರೆ. ಸ್ವೀಟ್ ಕಾರ್ನ್ ಸೂಪ್, ಪಲ್ಯೆ ಸೇರಿದಂತೆ ರುಚಿ-ರುಚಿ ಅಡುಗೆ ಮಾಡಿ ತಿನ್ನುತ್ತೇವೆ. ಆದ್ರೆ ಹೊಟೇಲ್ ನಲ್ಲಿ ಮಾಡಿದ ರುಚಿ ಬರಲ್ಲ ಅಂತಾ ಬೇಸರಪಟ್ಟುಕೊಳ್ಳುವ ಮಹಿಳೆಯರಿದ್ದಾರೆ. ಸ್ವೀಟ್ ಕಾರ್ನ್ ರುಚಿ ಹೆಚ್ಚಾಗಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕು.
ಕುಕ್ಕರ್ ನಲ್ಲಿ ಒಂದು ಸೀಟಿ ಹೊಡೆಸಿ ಸ್ವೀಟ್ ಕಾರ್ನ್ ಬೇಯಿಸುವುದು ಬೆಸ್ಟ್.
ಬೇಯಿಸುವ ವೇಳೆ ಸ್ವೀಟ್ ಕಾರ್ನ್ ಗೆ ಉಪ್ಪನ್ನು ಅಪ್ಪಿತಪ್ಪಿಯೂ ಹಾಕಬೇಡಿ.
ಮೈಕ್ರೋವೇವ್ ನಲ್ಲಿ ಕೂಡ ಸ್ವೀಟ್ ಕಾರ್ನ್ ಬೇಯಿಸಬಹುದು.
ಸುಮಾರು ಮೂರು ನಿಮಿಷದವರೆಗೆ ಮೈಕ್ರೋವೇವ್ ನಲ್ಲಿ ಬೇಯಿಸಬೇಕಾಗುತ್ತದೆ.
ಸ್ವೀಟ್ ಕಾರ್ನ್ ರುಚಿ ಹೆಚ್ಚಬೇಕೆಂದ್ರೆ ನೀರಿನಲ್ಲಿ ಬೇಯಿಸುವುದಕ್ಕಿಂತ ಉಗಿಯಲ್ಲಿ ಬೇಯಿಸುವುದು ಬೆಸ್ಟ್.
ಉಗಿಯಲ್ಲಿ ಬೇಯಿಸುವ ವೇಳೆ ಉರಿ ಜಾಸ್ತಿಯಿರಲಿ. ಹಬೆಯಲ್ಲಿ ಬೇಯಿಸಲು ನೀವು ಇಡ್ಲಿ ಕುಕ್ಕರ್ ಬಳಸಬಹುದು.