ಒತ್ತಡವು ಹೊರಕ್ಕೆ ಕಾಣಿಸಿಕೊಳ್ಳದೆ ದೇಹದ ಮೇಲೆ ದಾಳಿ ಮಾಡುತ್ತದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದು ಬಹಳ ರೋಗಗಳನ್ನು ತಂದೊಡ್ಡುತ್ತದೆ. ತಿಳಿದುಕೊಂಡರೆ ಅನೇಕ ರೋಗಗಳನ್ನು ದೂರವಿಡಬಹುದು. ಇದರಿಂದ ಮೆದುಳು ಉದ್ರೇಕಕ್ಕೆ ಒಳಗಾಗುವುದಿಲ್ಲ.
ಆಹಾರದಲ್ಲಿ ಮುಖ್ಯವಾಗಿ ಬೇಳೆ ಕಾಳುಗಳು, ಹಣ್ಣುಗಳು, ಹಾಲು ಹಾಗೂ ತರಕಾರಿಗಳನ್ನು ಸೇವಿಸಬೇಕು. ಉಪ್ಪಿನಕಾಯಿ, ಮಟನ್, ಚಿಕನ್ ಬಳಕೆ ಮಿತಿಯಲ್ಲಿರಬೇಕು. ಏಲಕ್ಕಿ, ತುಳಸಿ ಲೆಟ್ಯೂಸ್, ಪುದೀನಾ, ಸೋಂಪು ಕಾಳುಗಳಲ್ಲಿ ಮೆದುಳಿಗೆ ವಿಶ್ರಾಂತಿಯನ್ನು ಕೊಡುವ ಗುಣಗಳಿವೆ. ಆದ್ದರಿಂದ ದಿನದಲ್ಲಿ ಇವುಗಳಲ್ಲಿ ಯಾವುದಾದರೂ ಒಂದನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ.
ವಾರಕ್ಕೊಂದು ಸಾರಿ ತಲೆಗೆ, ದೇಹಕ್ಕೆ ಹರಳೆಣ್ಣೆ ಹಚ್ಚಿ ಮರ್ಧನ ಮಾಡಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.
ದಿನಕ್ಕೆ ಕನಿಷ್ಠ ಹತ್ತು ನಿಮಿಷ (ಬೆಳಗ್ಗೆ ನಿದ್ರೆಯಿಂದ ಏಳುತ್ತಲೇ ಐದು ನಿಮಿಷ, ರಾತ್ರಿ ಮಲಗುವ ಮುನ್ನ ಐದು ನಿಮಿಷ) ಶ್ವಾಸದ ಮೇಲೆ ಧ್ಯಾನವಿರಿಸಬೇಕು. ದೀರ್ಘವಾಗಿ ಶ್ವಾಸವನ್ನು ತೆಗೆದುಕೊಂಡು ಶ್ವಾಸಕೋಶದಿಂದ ನಿಧಾನವಾಗಿ ಉಸಿರನ್ನು ಹೊರಗೆ ಬಿಡಬೇಕು.
ಇದೆಲ್ಲವನ್ನು ಪಾಲಿಸಿದರೆ ಎಷ್ಟೋ ಕೆಲಸ ಕಾರ್ಯಗಳಿಂದ ಬ್ಯುಸಿಯಾಗಿದ್ದರೂ ಮೆದುಳು ಅವೆಲ್ಲವುಗಳನ್ನೂ ಸಮರ್ಥವಾಗಿ ನಿಗ್ರಹಿಸಬಲ್ಲದು.