ಕೂದಲು ವಿಪರೀತ ಉದುರುವ ಸಮಸ್ಯೆ ಹೊಂದಿರುವವರು ಕೆಲವೊಮ್ಮೆ ವಿಗ್ ಬಳಸುವ ಅನಿವಾರ್ಯತೆ ಉಂಟಾಗಬಹುದು. ಕೆಲವೊಮ್ಮೆ ಸ್ಟೈಲ್ ಗಾಗಿಯೂ ವಿಗ್ ಬಳಸಬೇಕಾಗಬಹುದು. ಅಂಥಹ ಸಂದರ್ಭದಲ್ಲಿ ಅದನ್ನು ಕಾಪಾಡುವುದು ಹೇಗೆ?
ವಿಗ್ ತೊಳೆಯುವ ಅರ್ಧ ಗಂಟೆ ಮೊದಲು ಅದಕ್ಕೆ ಕಂಡಿಷನರ್ ಹಾಕಿಡಿ. ಬಳಿಕ ಶ್ಯಾಂಪೂವಿನಿಂದ ತೊಳೆಯಿರಿ. ತೆಂಗಿನೆಣ್ಣೆ ಹಚ್ಚುವಾಗ ಪ್ರತಿ ಕೂದಲಿಗೂ ಎಣ್ಣೆ ತಾಕುವಂತೆ ನಿಧಾನವಾಗಿ ಮೆದುವಾಗಿ ಹಚ್ಚಿ. ಸಿಕ್ಕಾಗದಂತೆ ನೋಡಿಕೊಳ್ಳಿ.
ಸಾಮಾನ್ಯವಾಗಿ ವಿಗ್ ಅನ್ನು ಕನಿಷ್ಠ 20 ಬಾರಿ ಬಳಸಿದ ಬಳಿಕ ತೊಳೆದರೆ ಸಾಕು. ಅಥವಾ ಹೆಚ್ಚು ಕೊಳೆಯಾಗಿದೆ ಎನಿಸಿದಾಗ ತೊಳೆಯಿರಿ. ತೊಳೆಯುವಾಗ ತಣ್ಣೀರನ್ನೇ ಬಳಸಿ. ನೊರೆ ಉಳಿಯದಂತೆ ನೋಡಿಕೊಳ್ಳಿ. ಕೂದಲಿನ ತುದಿಗೆ ಹೆಚ್ಚು ಕಂಡಿಷನರ್ ಹಚ್ಚಿ. ಇಲ್ಲಿ ಕೂದಲು ತುಂಡಾಗುವುದು ಅಧಿಕ.
ನೀರನ್ನು ಕೈಯಿಂದ ಹಿಂಡಿ ತೆಗೆದ ಬಳಿಕ ಬಾಚಣಿಗೆಯಿಂದ ನಿಧಾನವಾಗಿ ಬಾಚಿ. 20 ನಿಮಿಷ ನೀರು ಒಣಗಲು ಬಿಡಿ. ಬಳಿಕ ಮಾಯಿಸ್ಚರೈಸರ್ ಹಚ್ಚಿ. ಮಲಗುವಾಗ ವಿಗ್ ತೆಗೆದಿಟ್ಟು ಮಲಗಿ. ಪ್ರತಿ ಬಾರಿ ತೊಡುವಾಗ ಒಂದು ಹನಿ ಎಣ್ಣೆ ಹಾಕಿಯೇ ಕೂದಲನ್ನು ಬಾಚಿ.