alex Certify ಬಾತ್ ರೂಂ ಸ್ವಚ್ಛಗೊಳಿಸಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್ ರೂಂ ಸ್ವಚ್ಛಗೊಳಿಸಲು ಫಾಲೋ ಮಾಡಿ ಈ ಟಿಪ್ಸ್

ಬಾತ್ ರೂಂ ಟೈಲ್ಸ್ ಅನ್ನು ಎಷ್ಟು ಸಾರಿ ಕ್ಲೀನ್ ಮಾಡಿದರೂ ಬಹಳ ಬೇಗ ಗಲೀಜಾಗುತ್ತದೆ ಮತ್ತು ಕೊಳೆ ಹಾಗೇ ಅಂಟಿಕೊಂಡಿರುತ್ತದೆ. ಇದನ್ನು ತುಂಬಾ ಉಜ್ಜಿ ತೊಳೆಯಬೇಕು ಇಲ್ಲವಾದರೆ ಅದು ಕ್ಲೀನ್ ಆಗುವುದಿಲ್ಲ. ಹಾಗಾಗಿ ಬಾತ್ ರೂಂ ಟೈಲ್ಸ್ ನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ.

* ಬಾತ್ ರೂಂ ಸ್ವಚ್ಛಗೊಳಿಸಲು ವಿನೆಗರ್ ಬಹಳ ಸಹಕಾರಿ. ವಿನೆಗರ್ ಅನ್ನು ಟೈಲ್ಸ್ ಮೇಲೆ ಸಿಂಪಡಿಸಿ ಬಳಿಕ ಬಿಸಿ ನೀರಿನ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ.

* ಬಾತ್ ರೂಂ ಟೈಲ್ಸ್ ಸ್ವಚ್ಛವಾಗಲು ಅಡುಗೆ ಸೋಡಾ ಮತ್ತು ನಿಂಬೆ ರಸ ಉತ್ತಮವಾದ ಮನೆಮದ್ದಾಗಿದೆ. ಅಡುಗೆ ಸೋಡಾ ಮತ್ತು 3 ಚಮಚ ನಿಂಬೆ ರಸವನ್ನು ಸೇರಿಸಿ ದಪ್ಪ ಮಿಶ್ರಣ ಮಾಡಿ ಅದನ್ನು ಟೈಲ್ಸ್ ಮೇಲೆ ಹಾಕಿ ಬ್ರಶ್ ಸಹಾಯದಿಂದ ಉಜ್ಜಿದರೆ ಟೈಲ್ಸ್ ಬಹಳ ಸುಲಭವಾಗಿ ಸ್ವಚ್ಛವಾಗುತ್ತದೆ.

* ಹಳೆಯದಾದ ಮತ್ತು ಮೊಂಡು ಕಲೆಗಳನ್ನು ತೆಗೆಯಲು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ. ಅಡುಗೆ ಸೋಡಾದೊಂದಿಗೆ ಹೈಡ್ರೋಜನ್ ಪೆರಾಕ್ಸೈಡ್ ನ್ನು ಮಿಕ್ಸ್ ಮಾಡಿ ಟೈಲ್ಸ್ ಮೇಲೆ ಹಾಕಿ 10 ನಿಮಿಷ ಬಿಟ್ಟು ಸ್ವಚ್ಛಗೊಳಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...