ಲಿಪ್ಸ್ಟಿಕ್ ಮೇಕಪ್ ನ ಪ್ರಮುಖ ಭಾಗ. ಮುಖದ ಸೌಂದರ್ಯವನ್ನು ಲಿಪ್ಸ್ಟಿಕ್ ಹೆಚ್ಚಿಸುತ್ತದೆ. ಕೆಲವೊಮ್ಮೆ ಬಹುಬೇಗ ಲಿಪ್ಸ್ಟಿಕ್ ಅಳಿಸಿ ಹೋಗುತ್ತದೆ. ಇಲ್ಲವೆ ಒಣಗುತ್ತದೆ. ಇದ್ರಿಂದ ತುಟಿಗಳ ಸೌಂದರ್ಯ ಹಾಳಾಗುತ್ತದೆ. ಲಿಪ್ಸ್ಟಿಕ್ ದೀರ್ಘಕಾಲ ಇರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕು.
ತುಟಿಗಳನ್ನು ಸ್ಕ್ರಬ್ ಮಾಡಬೇಕು. ಆಗ ತುಟಿ ಸುತ್ತಲಿನ ಸತ್ತ ಚರ್ಮ ಹೊರಗೆ ಬರುತ್ತದೆ. ಇದಕ್ಕಾಗಿ ಮಾಯಿಶ್ಚುರೈಸಿಂಗ್ ಲಿಪ್ ಬಾಮ್ ಹಚ್ಚಿಕೊಳ್ಳಬೇಕು. ನಂತ್ರ ತುಟಿಗಳನ್ನು ಮಸಾಜ್ ಮಾಡಬೇಕು. ಲಿಪ್ಸ್ಟಿಕ್ ಹಚ್ಚುವ ಮೊದಲು ಇದನ್ನು ಒರೆಸಿ ನಂತ್ರ ಲಿಪ್ಸ್ಟಿಕ್ ಹಚ್ಬಬೇಕು.
ಲಿಪ್ಸ್ಟಿಕ್ ಹೈಲೈಟ್ ಆಗಲು ಹಾಗೂ ಹೆಚ್ಚು ಕಾಲ ತುಟಿ ಮೇಲೆ ಇರಲು ಕನ್ಸೀಲರ್ ಸಹಾಯ ಮಾಡುತ್ತದೆ. ಇದರ ಹೊರತಾಗಿ ಪ್ರೈಮರ್, ತುಟಿಗಳನ್ನು ತೇವಗೊಳಿಸುತ್ತದೆ. ಹಾಗಾಗಿ ಲಿಪ್ಸ್ಟಿಕ್ ಹಚ್ಚುವ ಮೊದಲು ಪ್ರೈಮರನ್ನು ಬೆರಳುಗಳ ಸಹಾಯದಿಂದ ತುಟಿಗೆ ಹಚ್ಚಬೇಕು.
ಲಿಪ್ ಸ್ಟಿಕ್ ಹಚ್ಚುವ ಮುನ್ನ ಲಿಪ್ ಲೈನರ್ ಹಚ್ಚಿ. ಆಗ ಲಿಪ್ಸ್ಟಿಕ್ ಹೊರಬರುವುದಿಲ್ಲ. ತುಟಿಗಳು ಹೆಚ್ಚು ಸುಂದರವಾಗಿ ಕಾಣುತ್ತವೆ.
ತುಟಿಗಳ ಸೌಂದರ್ಯ ಕಾಪಾಡಿಕೊಳ್ಳಲು ಹಾಗೂ ದೀರ್ಘಕಾಲ ಲಿಪ್ಸ್ಟಿಕ್ ಇರಬೇಕೆಂದ್ರೆ ಸರಿಯಾದ ಲಿಪ್ಸ್ಟಿಕ್ ಆಯ್ಕೆ ಮಾಡಬೇಕು. ಬೆಲೆ ನೋಡಿ ಲಿಪ್ಸ್ಟಿಕ್ ಖರೀದಿ ಮಾಡಬಾರದು.
ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿದ ನಂತ್ರ, ಸುತ್ತಮುತ್ತ ಲಿಪ್ಸ್ಟಿಕ್ ಬಂದಿದ್ದರೆ ಅದನ್ನು ಸ್ವಚ್ಛಗೊಳಿಸಬೇಕು. ಟಿಶ್ಯೂ ಪೇಪರ್ ನಿಂದ ತುಟಿಗಳನ್ನು ಸ್ವಚ್ಛಗೊಳಿಸಬೇಕು. ತುಟಿಗಳಿಗೆ ಸ್ವಲ್ಪ ಪೌಡರ್ ಹಚ್ಚಬೇಕು.